ಸಿದ್ದಾಪುರ (ಕೊಡಗು ಜಿಲ್ಲೆ): ಇಲ್ಲಿಗೆ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ಕಾಫಿ ತೋಟದಲ್ಲಿ ಕಾಡಾನೆ ಹಿಂಡು ಶುಕ್ರವಾರ ಬೀಡುಬಿಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಸುಮಾರು 38 ಕಾಡಾನೆಗಳು ಕಾಫಿ ತೋಟದಲ್ಲಿ ಸುತ್ತಾಡುತ್ತಿವೆ. ಹಿಂಡಿನಲ್ಲಿ ರೆಡಿಯೊ ಕಾಲರ್ ಅಳವಡಿಸಿದ ಕಾಡಾನೆಯೂ ಇದೆ. ಇದರಿಂದ ಕಾಫಿ ಸೇರಿದಂತೆ ಕೃಷಿ ಫಸಲು ಹಾಗೂ ಗಿಡಗಳು ನಾಶವಾಗಿದೆ. ಶಾಲಾ ಮಕ್ಕಳು ಭಯದಿಂದಲೇ ಪರೀಕ್ಷೆ ತೆರಳುತ್ತಿದ್ದಾರೆ.
ವಿರಾಜಪೇಟೆ ವಿಭಾಗದ ತಿತಿಮತಿ ಅರಣ್ಯ ವಲಯದ ಪಾಲಿಬೆಟ್ಟ, ಚೆನ್ನಯ್ಯನಕೋಟೆ, ಬಾಡಗ-ಬಾಣಂಗಾಲ, ಮೇಕೂರು ಹೊಸ್ಕೇರಿ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಮಾರ್ಚ್ 22 ರಂದು ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಗಂಗಾಧರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.