ADVERTISEMENT

ಸಿದ್ದಾಪುರ: ಚಿಕ್ಲಿಹೊಳೆಯಲ್ಲಿ ಇಲಿ ಜಿಂಕೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 6:23 IST
Last Updated 5 ಜನವರಿ 2026, 6:23 IST
ಸಿದ್ದಾಪುರದಲ್ಲಿ ಗುರುವಾರ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಸಚಿನ್ ನಿಂಬಾಳ್ಕರ್, ಗಸ್ತು ಅರಣ್ಯ ಪಾಲಕ ನಾಗರಾಜ್ ರಡರಟ್ಟಿ, ಅರಣ್ಯ ವೀಕ್ಷಕರಾದ ಅಪ್ಪಾಸ್ವಾಮಿ, ಜಗದೀಶ್, ಚಾಲಕ ವಾಸುದೇವ ಇವರ ತಂಡ ಇಲಿಜಿಂಕೆಯನ್ನು ಸಂರಕ್ಷಿಸಿರುವುದು
ಸಿದ್ದಾಪುರದಲ್ಲಿ ಗುರುವಾರ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಸಚಿನ್ ನಿಂಬಾಳ್ಕರ್, ಗಸ್ತು ಅರಣ್ಯ ಪಾಲಕ ನಾಗರಾಜ್ ರಡರಟ್ಟಿ, ಅರಣ್ಯ ವೀಕ್ಷಕರಾದ ಅಪ್ಪಾಸ್ವಾಮಿ, ಜಗದೀಶ್, ಚಾಲಕ ವಾಸುದೇವ ಇವರ ತಂಡ ಇಲಿಜಿಂಕೆಯನ್ನು ಸಂರಕ್ಷಿಸಿರುವುದು   

ಸಿದ್ದಾಪುರ: ಚಿಕ್ಲಿಹೊಳೆ ಜಲಾಶಯದ ಕಾಲುವೆಯಲ್ಲಿ ಬಿದ್ದಿದ್ದ ಇಲಿ ಜಿಂಕೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ  ರಕ್ಷಿಸಿ, ಅರಣ್ಯಕ್ಕೆ ಬಿಡುಟ್ಟರು

ಕುಶಾಲನಗರ ವಲಯದ ಮೀನುಕೊಲ್ಲಿ ಉಪವಲಯದ ಚಿಕ್ಲಿಹೊಳೆ ನಾಲೆಯಲ್ಲಿ ಗುರುವಾರ ರಾತ್ರಿ ಇಲಿಜಿಂಕೆಯೊಂದು ಸಿಲುಕಿರುವ ಬಗ್ಗೆ ಸ್ಥಳೀಯರು ಮಾಹಿತಿ‌ ನೀಡಿದ್ದರು.  ಅರಣ್ಯ ಇಲಾಖೆ ತಂಡ ಪರಿಶೀಲಿಸಿದಾಗ ಇಲಿ ಜಿಂಕೆಯೊಂದು ನಾಲೆಯ ನೀರಲ್ಲಿ  ಸಿಲುಕಿ,  ಹೊರಬರಲು ಸಾಧ್ಯವಾಗುತ್ತಿರಲಿಲ್ಲ.  ತಂಡದವರು ಅದನ್ನು ನಾಲೆಯಿಂದ ಹೊರತೆಗೆದು ಅರಣ್ಯಕ್ಕೆ ಬಿಟ್ಟರು. 

ಉಪ ವಲಯ ಅರಣ್ಯಾಧಿಕಾರಿ ಸಚಿನ್ ನಿಂಬಾಳ್ಕರ್, ಗಸ್ತು ಅರಣ್ಯ ಪಾಲಕ ನಾಗರಾಜ್ ರಡರಟ್ಟಿ, ಅರಣ್ಯ ವೀಕ್ಷಕರಾದ ಅಪ್ಪಾಸ್ವಾಮಿ, ಜಗದೀಶ್, ಚಾಲಕ ವಾಸುದೇವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.