ADVERTISEMENT

ಸುಂಟಿಕೊಪ್ಪ: ದೇವಿಗೆ ಅಲಂಕಾರ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 6:05 IST
Last Updated 29 ಸೆಪ್ಟೆಂಬರ್ 2025, 6:05 IST
ಸುಂಟಿಕೊಪ್ಪ ಚಾಮುಂಡೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಏಳನೇ ದಿನವಾದ ಭಾನುವಾರ ದೇವಿಗೆ ಅರಸಿನ- ಕುಂಕುಮ ಅಲಂಕಾರ ಮಾಡಲಾಗಿತ್ತು
ಸುಂಟಿಕೊಪ್ಪ ಚಾಮುಂಡೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಏಳನೇ ದಿನವಾದ ಭಾನುವಾರ ದೇವಿಗೆ ಅರಸಿನ- ಕುಂಕುಮ ಅಲಂಕಾರ ಮಾಡಲಾಗಿತ್ತು   

ಸುಂಟಿಕೊಪ್ಪ: ಇಲ್ಲಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಏಳನೇ ದಿನವಾದ ಭಾನುವಾರ ಬೆಳಿಗ್ಗೆ ದೇವಿಗೆ ಶುದ್ಧಿ ಪೂಜೆ, ನೈವೇದ್ಯ ಪೂಜೆ, ಹೂವಿನ ಅಲಂಕಾರ, ಆರತಿ ಪೂಜೆ ನಡೆಯಿತು.

ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ್ ಉಡುಪ ನೇತೃತ್ವದಲ್ಲಿ ಸಂಜೆ ಶುದ್ಧ ಪೂಜೆ, ವಿಶೇಷ ಪೂಜೆಯ ನಂತರ ದೇವಿಗೆ ಅರಸಿನ- ಕುಂಕುಮ ಅಲಂಕಾರ ಮಾಡುವುದರ ಮೂಲಕ ದೇವಾಲಯದಲ್ಲಿ ಭಕ್ತರಿಗೆ ಪೂಜೆಗೆ ಅವಕಾಶ ನೀಡಲಾಯಿತು. ರಾತ್ರಿ ಮಹಾಪೂಜೆ, ಆರತಿ ಪೂಜೆ, ದೀಪರಾಧನೆ ನಡೆಯಿತು.

ಹೋಬಳಿ ವ್ಯಾಪ್ತಿಯ ವಿವಿಧ‌ ಕಡೆಗಳಿಂದ‌ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ADVERTISEMENT
ಸುಂಟಿಕೊಪ್ಪ ಚಾಮುಂಡೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಏಳನೇ ದಿನವಾದ ಭಾನುವಾರ ದೇವಿಗೆ ಅರಸಿನ- ಕುಂಕುಮ ಅಲಂಕಾರ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.