ಸುಳ್ಯ: ಸಂಪಾಜೆ ಭಾಗದಲ್ಲಿ ಸೋಮವಾರ ಮತ್ತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಭಾರಿ ಹಾನಿ ಸಂಭವಿಸಿದೆ.
ಕೊಡಗಿನ ಗಡಿ ಭಾಗದಲ್ಲಿ ಸುರಿದ ಭಾರಿ ಮಳೆಗೆ ಕೊಯನಾಡು, ಚೆಂಬು ಗ್ರಾಮದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು , ಮಾರ್ಪಡ್ಕ ಊರುಬೈಲು ಸೇತುವೆಯ ಎರಡೂ ಬದಿ ಕುಸಿತವಾಗಿದ್ದು, ಕೊಯನಾಡಿನಲ್ಲಿ ಕಿಂಡಿ ಅಣೆಕಟ್ಟಿಗೆ ಬೃಹತ್ ಗಾತ್ರದ ಮರದ ದಿಮ್ಮಿಗಳು ಬಂದು ಅಡ್ಡಲಾಗಿ ನಿಂತಿದ್ದು, ಈ ಪರಿಸರದ ಹಲವು ಮನೆಗಳು ಜಲಾವೃತಗೊಂಡಿದೆ.
ಚೆಂಬು ಗ್ರಾಮದ ಆನೆಹಳ್ಳ ಎಂಬಲ್ಲಿ ಕಿಂಡಿ ಅಣೆಕಟ್ಟು ನೀರಿನಲ್ಲಿ ಕೊಚ್ಚಿಹೋಗಿದ್ದು , ದಬ್ಬಡ್ಕದಲ್ಲೂ ಗುಡ್ಡ ಕುಸಿದಿದ್ದು, ಸಮೀಪದ ರವಿ ಎಂಬವರ ಮನೆಗೆ ಹಾನಿ ಸಂಭವಿಸಿದೆ.
ಇತ್ತೀಚಿಗೆ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದ ಮಾರ್ಪಡ್ಕ – ಊರುಬೈಲು ಸೇತುವೆಯ ಎರಡೂ ಬದಿ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಈ ಪರಿಸರದ ಹಲವು ಕೃಷಿಕರ ಅಡಿಕೆ ತೋಟಗಳು ನೀರಿನಿಂದ ಆವೃತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.