ಮಡಿಕೇರಿ: ರಾಜ್ಯ ಸರ್ಕಾರ ರಾಜ್ಯದ ಒಟ್ಟು 197 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಿಸಿದೆ. ಆ ಪಟ್ಟಿಯಲ್ಲಿ ಸದ್ಯ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಕೆ.ಎಸ್.ಸುಂದರ್‌ರಾಜ್ ಸಹ ಸ್ಥಾನ ಪಡೆದಿದ್ದಾರೆ.
ಇವರು 1994ರಲ್ಲಿ ಸಬ್‌ಇನ್‌ಸ್ಪೆಕ್ಟರ್ ಆಗಿ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಬುನಾದಿ ತರಬೇತಿ ಹಾಗೂ ಪ್ರಾಯೋಗಿಕ ತರಬೇತಿಯನ್ನು ಮುಲ್ಕಿ, ಪುತ್ತೂರಿನಲ್ಲಿ ಪಡೆದು, 1996ರಿಂದ 2001ರವರಗೆ ಕಾರ್ಕಳದಲ್ಲಿ ಸಬ್‌ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದರು.
ಇವರ ಕಾರ್ಯವೈಖರಿ ಕಂಡ ಇಲಾಖೆ ಇವರಿಗೆ ಇನ್‌ಸ್ಪೆಕ್ಟರ್ ಆಗಿ ಬಡ್ತಿ ನೀಡಿ, ಜಿಲ್ಲಾ ಅಪರಾಧ ಪತ್ತೆ ದಳ ಮೈಸೂರಿಗೆ ವರ್ಗಾವಣೆ ಮಾಡಿತು. ನಂತರ ಇವರು ಮಡಿಕೇರಿ ಗ್ರಾಮಾಂತರದ ಸಿಪಿಐ ಆಗಿ 2006ರಿಂದ 09ರವರೆಗೆ ಹುಣಸೂರಿನಲ್ಲಿ ಸಿಪಿಐ ಆಗಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ, ತಿ.ನರಸೀಪುರದಲ್ಲಿ ಕಾರ್ಯನಿರ್ವಹಿಸಿದರು. ಬಳಿಕ ಡಿಎಸ್‌ಪಿಯಾಗಿ ಬಡ್ತಿ ಪಡೆದು ಆಂತರಿಕ ಭದ್ರತಾ ವಿಭಾಗದಲ್ಲಿ ಎಎಸ್‌ಪಿ ಚಾಮರಾಜನಗರದಲ್ಲಿ ಎಎಸ್‌ಪಿಯಾಗಿ 2023ರಿಂದ ಇಲ್ಲಿಯವರೆಗೆ ಕೊಡಗು ಜಿಲ್ಲೆಯ ಎಎಸ್‌ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶನಿವಾರಷ್ಟೇ ಇವರು ಮೈಸೂರು ನಗರ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿಯಾಗಿ ವರ್ಗಾವಣೆಗೊಂಡಿದ್ದಾರೆ.
2019ರಲ್ಲಿ ಇವರು ಪ್ರವಾಹ ಸಂತ್ರಸ್ಥರ ನೆರವಿಗೆ ಸಂಬಂಧಿಸಿದಂತೆ ನಡೆಸಿದ ಕಾರ್ಯ ವೈಖರಿ ಗಮನಿಸಿ ರಾಷ್ಟ್ರಪತಿಗಳ ಪದಕವನ್ನೂ ನೀಡಿ ಗೌರವಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.