ADVERTISEMENT

ಬಂಗಾರಪೇಟೆ: ಬಸ್ ತಡೆದು ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 6:18 IST
Last Updated 9 ಡಿಸೆಂಬರ್ 2025, 6:18 IST
ಬಂಗಾರಪೇಟೆ ತಾಲ್ಲೂಕಿನ ಕೊಳಮೂರು ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೋಮವಾರ  ಕೆಎಸ್‌ಆರ್‌ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದರು 
ಬಂಗಾರಪೇಟೆ ತಾಲ್ಲೂಕಿನ ಕೊಳಮೂರು ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೋಮವಾರ  ಕೆಎಸ್‌ಆರ್‌ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದರು    

ಬಂಗಾರಪೇಟೆ: ಗಡಿಭಾಗದ ಕೊಳಮೂರು ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ಪ್ರತಿ ನಿತ್ಯ ಸಂಚರಿಸದ ಕಾರಣ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸೋಮವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಕೊಳಮೂರು ಗ್ರಾಮಕ್ಕೆ ಪ್ರತಿನಿತ್ಯ ಸರ್ಕಾರಿ ಬಸ್ ಎರಡು ಬಾರಿ ಸಂಚರಿಸುತ್ತಿತ್ತು. ಆದರೆ, ಕೆಲವು ದಿನಗಳಿಂದ ಬೆಳಗ್ಗೆ ಬಸ್ ಬಂದರೆ ಸಂಜೆ ಬರುವುದಿಲ್ಲ. ಸಂಜೆ ಬಂದರೆ ಬೆಳಗ್ಗೆ ಬರುವುದಿಲ್ಲ. ಒಂದೇ ಬಸ್ ಅನ್ನು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ನಂಬಿಕೊಂಡಿದ್ದು, ಬಸ್ ಬಾರದ ವೇಳೆ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗಲು ಆಗುತ್ತಿಲ್ಲ ಮತ್ತು ಮನೆಗೆ ಹಿಂತಿರುಗಲು ಸಾಧ್ಯವಾಗುತ್ತಿಲ್ಲ.

ಬಸ್ ಬಾರದ ವೇಳೆ 7 ಕಿ.ಮೀ ದೂರದ ತೊಪ್ಪನಹಳ್ಳಿ ಗ್ರಾಮಕ್ಕೆ ನಡೆದುಕೊಂಡು ಹೋಗಿ ಅಲ್ಲಿಂದ ಬಸ್ ಹತ್ತಿ ತರಗತಿಗಳಿಗೆ ಹಾಜರಾಗಬೇಕು. ರಸ್ತೆ ಮಾರ್ಗವು ಅರಣ್ಯ ಪ್ರದೇಶದಲ್ಲಿರುವ ಕಾರಣ ಕಾಡುಪ್ರಾಣಿಗಳ ಭಯದಲ್ಲಿ ಸಾಗಬೇಕಿದೆ. ಹಾಗಾಗಿ ಪ್ರತಿನಿತ್ಯ ಬಸ್ ಸೌಲಭ್ಯ ಒದಗಿಸಬೇಕೆಂದು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಗ್ರಾಮಸ್ಥರು ಸೋಮವಾರ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.

ADVERTISEMENT

ಈ ವೇಳೆ ಪ್ರತಿಭಟನಾಕಾರರು ಡಿಪೊ ಮ್ಯಾನೇಜರ್ ನೇತ್ರಾವತಿ ಅವರನ್ನು ಫೋನ್ ಮೂಲಕ ಸಂಪರ್ಕಿಸಿ, ಬಸ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನಿಯಮಿತವಾಗಿ ಬಸ್ ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಿದರು. ಅದಕ್ಕೆ ಉತ್ತರಿಸಿ ಮ್ಯಾನೇಜರ್ ನನಗೂ ಅದಕ್ಕೆ ಸಂಬಂಧವಿಲ್ಲ. ಪ್ರತಿಯೊಂದು ಬಸ್ ಹಿಂದೆ ನಾನು ಬರುವುದಕ್ಕೆ ಆಗುವುದಿಲ್ಲ. ಸರಿಯಾದ ಸಮಯಕ್ಕೆ ಬಸ್ ಬಂದಿಲ್ಲ ಎಂದರೆ ಡ್ರೈವರ್ ತಪ್ಪು ನನ್ನದಲ್ಲ ಎಂದು ಸಮಜಾಯಿಸಿ ಉತ್ತರ ನೀಡಿದ್ದಾರೆ.

ಹಾಗಾಗಿ ಪ್ರತಿಭಟನಾನಿರತರು ಕುಪಿತಗೊಂಡು ಸಮಸ್ಯೆ ಬಗೆಹರಿಯುವವರೆಗೂ ಬಸ್ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಕಾಮಸಮುದ್ರ ಪೊಲೀಸರು ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಗನಮಕ್ಕೆ ತರಲಾಗುವುದು ಎಂದು ಮನವೊಲಿಸಿ  ಪ್ರತಿಭಟನೆ ನಿಲ್ಲಿಸಿದರು.

ಕೃಷ್ಣೋಜಿರಾವ್ ಕರಾಡೆ, ಬಾಬು ರಾವ್ ಪಟೇಲ್, ಆನಂದರಾವ್, ಲಕ್ಷ್ಮಣ್ ರಾವ್, ಚೇತನ್, ಮುತ್ತು ಹಾಜರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.