ADVERTISEMENT

ಮುಳಬಾಗಿಲು | ಮಹಿಳೆ ಅಟ್ಟಾಡಿಸಿ ಸರ ಕೀಳಲು ಕಳ್ಳರ ಯತ್ನ: ಸಿಸಿಟಿವಿಯಲ್ಲಿ ಸೆರೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 9:24 IST
Last Updated 26 ಜೂನ್ 2025, 9:24 IST
<div class="paragraphs"><p>ಮಹಿಳೆಯ ಸರ ಕದ್ದಿಯುತ್ತಿರುವ ದೃಶ್ಯ&nbsp;ಸಿಸಿಟಿವಿಯಲ್ಲಿ ಸೆರೆ</p></div>

ಮಹಿಳೆಯ ಸರ ಕದ್ದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

   

ಮುಳಬಾಗಿಲು: ಮುಳಬಾಗಿಲು ನಗರದ ಗೋಕುಲನಗರ ಬಡಾವಣೆಯಲ್ಲಿ ಸರಗಳ್ಳರು ಮಹಿಳೆಯನ್ಜು ಅಟ್ಟಾಸಿಕೊಂಡು ಹೋಗಿ ಸರ ಕೀಳಲು ಯತ್ನಿಸಿದ್ದಾರೆ.

ಸ್ಕೂಟರಿನಲ್ಲಿ ತೆರಳುತ್ತಿದ್ದ ಮಹಿಳೆಯನ್ನು ಬೈಕಿನಲ್ಲಿ ಇಬ್ಬರು ವ್ಯಕ್ತಿಗಳು ಹಿಂಬಾಲಿಸಿಕೊಂಡು ಬಂದಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಮಹಿಳೆ ಸ್ಕೂಟರ್ ನಿಲ್ಲಿಸಿ ಓಡುತ್ತಾರೆ‌. ಆಗ ಒಬ್ಬ ವ್ಯಕ್ತಿ ಆಕೆಯನ್ನು ಅಟ್ಟಾಡಿಸಿ ಮೇಲೆ ಬಿದ್ದು ಸರ ಕಿತ್ತುಕೊಳ್ಳಳು ಪ್ರಯತ್ನಿಸುತ್ತಾನೆ. ಮಹಿಳೆ ಕಿರುಚಿದ ಕಾರಣ ಆ ವ್ಯಕ್ತಿ ಬೈಕಿನಲ್ಲಿ ಪರಾರಿ ಆಗುತ್ತಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ADVERTISEMENT

ಕಾನ್‌ಸ್ಪೆಬಲ್ ಪತ್ನಿಯೂ ಆಗಿರುವ ಆ ಮಹಿಳೆಯು ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕಿ. ಪೊಲೀಸರಿಗೆ ದೂರು ನೀಡಿದ್ದು ಪರಿಶೀಲಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.