ADVERTISEMENT

ಮಲೆನಾಡಿನಂತಾದ ಮುಳಬಾಗಿಲು: ಮೋಡ ಕವಿದ ವಾತಾವರಣ, ಚಳಿಗೆ ನಡುಗಿದ ಜನತೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 5:48 IST
Last Updated 17 ಡಿಸೆಂಬರ್ 2025, 5:48 IST
ಮುಳಬಾಗಿಲು ತಾಲ್ಲೂಕಿನಲ್ಲಿ ಮಂಜು ಹಾಗೂ ಮೋಡ ಮುಚ್ಚಿದ ವಾತಾವರಣ ಆವರಿಸಿತ್ತು 
ಮುಳಬಾಗಿಲು ತಾಲ್ಲೂಕಿನಲ್ಲಿ ಮಂಜು ಹಾಗೂ ಮೋಡ ಮುಚ್ಚಿದ ವಾತಾವರಣ ಆವರಿಸಿತ್ತು    

ಮುಳಬಾಗಿಲು: ತಾಲ್ಲೂಕಿನಲ್ಲಿ ಮಂಗಳವಾರ ಬೆಳಗ್ಗೆಯಿಂದಲೂ ಮಂಜು ಹಾಗೂ ಮೋಡ ಮುಸುಕಿದ ವಾತಾವರಣ ಇದ್ದು, ಸಂಜೆ ತುಂತುರು ಮಳೆಯಾದ ಪರಿಣಾಮ ಜನ ಚಳಿಗೆ ತತ್ತರಿಸಿದ ದೃಶ್ಯಗಳು ಕಂಡುಬಂದವು.

ತಾಲ್ಲೂಕಿನಾದ್ಯಂತ ಮುಂಜಾನೆ ಐದು ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೂ ಮಂಜು ಕವಿದ ವಾತಾವರಣ ಕಂಡು ಬಂದು. ನಂತರ ಏಕಾಏಕಿ ಮೋಡ ಮುಚ್ಚಿ, ತುಂತುರು ಮಳೆಯಾಯಿತು. ಹಾಗಾಗಿ ಬೆಳಗ್ಗೆಯಿಂದ ಬಿಸಿಲು ಕಾಣದ ಜನತೆ ಚಳಿಯಿಂದ ನಡುಗಿದ್ದಾರೆ.

ಚಳಿ ಹೆಚ್ಚಾದ ಹಿನ್ನೆಲೆ ಸಾರ್ವಜನಿಕರು ಸ್ವೆಟರ್, ಜಾಕೆಟ್ ಹಾಕಿ ತಲೆಗೆ ಟೋಪಿ, ರುಮಾಲು ಸುತ್ತಿಕೊಂಡು ಸಂಚರಿಸುತ್ತಿದ್ದರೂ. ಶಾಲಾ ಮಕ್ಕಳು ನಾನಾ ಬಗೆಯ ಸ್ವೆಟರ್, ತಲೆಗೆ ಟೋಪಿ, ಕಿವಿಗೆ ಹತ್ತಿ, ಕೈಗೆ ಗ್ಲೌಸ್ ಹಾಗೂ ಮತ್ತಿತರ ಸುರಕ್ಷತಾ ಸಾಧನ ಬಳಸಿ ಶಾಲೆಗಳಿಗೆ ಹೋಗಿ ಬರುತ್ತಿದ್ದದ್ದು ಕಂಡು ಬಂತು.

ADVERTISEMENT

ವಯೋವೃದ್ಧರು ಮನೆಗಳಿಂದ ಆಚೆ ಬಾರದೆ ಕೆಲವರು ಬೆಡ್‌ ಶೀಟ್, ಕಂಬಳಿ ಹೊದ್ದು ಕುಳಿತಿದ್ದರೆ, ಇನ್ನೂ ಕೆಲವು ರೈತರು ಚಳಿಯಲ್ಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.