ADVERTISEMENT

ಚಿನ್ನದ ಗಣಿ ಪುನರಾರಂಭಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 4:49 IST
Last Updated 22 ಡಿಸೆಂಬರ್ 2020, 4:49 IST
ಕೆಜಿಎಫ್‌ ಭಾರತ್ ಗೋಲ್ಡ್‌ ಎಂಪ್ಲಾಯಿಸ್‌ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಅನ್ಬಳಗನ್‌ ಮಾತನಾಡಿದರು
ಕೆಜಿಎಫ್‌ ಭಾರತ್ ಗೋಲ್ಡ್‌ ಎಂಪ್ಲಾಯಿಸ್‌ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಅನ್ಬಳಗನ್‌ ಮಾತನಾಡಿದರು   

ಕೆಜಿಎಫ್‌: ‘ಚಿನ್ನದ ಗಣಿಯನ್ನು ಪುನಃ ಆರಂಭಿಸಲು ಕೇಂದ್ರ ಸಚಿವರು ಮತ್ತು ರಾಜ್ಯದ ಮುಖ್ಯಮಂತ್ರಿ ಒಲವು ತೋರುತ್ತಿರುವುದು ಬಿಜಿಎಂಎಲ್‌ ಕಾರ್ಮಿಕ ಕುಟುಂಬಗಳಿಗೆ ಸಂತಸ ತಂದಿದೆ’ ಎಂದು ಭಾರತ್ ಗೋಲ್ಡ್ ಎಂಪ್ಲಾಯಿಸ್‌ ಸಹಕಾರ ಸಂಘದ ಅಧ್ಹಕ್ಷ ಅನ್ಬಳಗನ್ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ‘ಚಿನ್ನದ ನಿಕ್ಷೇಪಗಳನ್ನು ಪತ್ತೆ ಹಚ್ಚಿ ನಂತರ ಗಣಿ ತೆರೆಯುವ ಸಾಧ್ಯತೆಗಳನ್ನು ಜನಪ್ರತಿನಿಧಿಗಳು ಹೇಳಿದ್ದಾರೆ. ಸಂಸದ ಮುನಿಸ್ವಾಮಿ ಕೂಡ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜೊತೆ ವ್ಯವಹರಿಸುತ್ತಿರುವುದು ಎಲ್ಲರಿಗೂ ಸಮಾಧಾನ ತಂದಿದೆ. ಆದಷ್ಟು ಬೇಗ ಗಣಿಯನ್ನು ಪ್ರಾರಂಭಿಸಬೇಕು’ ಎಂದು ಒತ್ತಾಯಿಸಿದರು.

‘ಚಿನ್ನದ ಗಣಿ ಕಾಲೊನಿಗಳಲ್ಲಿ ಶತಮಾನಗಳಿಂದ ವಾಸ ಮಾಡುತ್ತಿರುವ ಮನೆಗಳನ್ನು ಅವರಿಗೇ ಸ್ವಂತ ನೀಡಬೇಕು. ಅವರಿಗೆ ಬೇಕಾದ ದಾಖಲೆಗಳನ್ನು ಒದಗಿಸಿಕೊಡಬೇಕು’ ಎಂದು ಅವರು ಅಧಿಕಾರಿಗಳಿಗೆ ಮನವಿ ಮಾಡಿದರು.

ADVERTISEMENT

ಪದಾಧಿಕಾರಿಗಳಾದ ಪ್ರಭುರಾಂ, ವಿನ್ಸಂಟ್‌, ಆರ್.ಗೋಪಿನಾಥ್‌, ಸಾವಿತ್ರಿ, ಮುನಿಯಮ್ಮ, ಆನಂದನ್‌, ಸುಬ್ರಹ್ಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.