ADVERTISEMENT

ಆಂಬುಲೆನ್ಸ್‌ ಸೌಲಭ್ಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 14:20 IST
Last Updated 23 ಅಕ್ಟೋಬರ್ 2022, 14:20 IST
ಕೊಪ್ಪಳದಲ್ಲಿ ಭಾನುವಾರ ಮುಸ್ಲಿಂ ಸಮಾಜದ ಪ್ರಮುಖರು ಆಂಬುಲೆನ್ಸ್‌ ಸೌಲಭ್ಯಕ್ಕೆ ಚಾಲನೆ ನೀಡಿದರು
ಕೊಪ್ಪಳದಲ್ಲಿ ಭಾನುವಾರ ಮುಸ್ಲಿಂ ಸಮಾಜದ ಪ್ರಮುಖರು ಆಂಬುಲೆನ್ಸ್‌ ಸೌಲಭ್ಯಕ್ಕೆ ಚಾಲನೆ ನೀಡಿದರು   

ಕೊಪ್ಪಳ: ಇಲ್ಲಿ ಭಾನುವಾರ ಅಲ್ ಅಮೀನ್ ಬೈತುಲ್ ಮಾಲ್ ಸೇವಾ ಟ್ರಸ್ಟ್ ವತಿಯಿಂದ ಕಡಿಮೆ ದರದಲ್ಲಿ ಆಂಬುಲೆನ್ಸ್‌ ಸೇವೆಗೆ ಚಾಲನೆ ನೀಡಲಾಯಿತು.

ಮುಫ್ತಿ ನಜೀರ್ ಅಹಮದ್ ಖಾದ್ರಿ ಮಾತನಾಡಿ ‘ಒಗ್ಗಟ್ಟು ಹಾಗೂ ಒಳ್ಳೆಯ ಉದ್ದೇಶದ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಬಡವರ ಅಸಹಾಯಕರ ಸೇವೆ ಮಾಡುವುದು ಧರ್ಮನಿಷ್ಠ ಕಾರ್ಯ’ ಎಂದರು.

ಟ್ರಸ್ಟ್‌ ಜಿಲ್ಲಾ ಘಟಕದ ಅಧ್ಯಕ್ಷ ಕಾಟನ್‌ ಪಾಷಾ ‘ಸಾಮಾಜಿಕ ಸೇವೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಮಾನವೀಯತೆಯಿಂದ ಮತ್ತೊಬ್ಬರಿಗೆ ಸೇವೆ ಸಹಾಯ ಮಾಡುವುದು ಪುಣ್ಯದ ಕೆಲಸ’ ಎಂದರು.

ADVERTISEMENT

ಮುಖಂಡ ಅಯೂಬ್ ಅಡ್ಡೆವಾಲೆ, ಜಿಲ್ಲಾ ವಕ್ಫ್‌ ಬೋರ್ಡ್‌ ಅಧ್ಯಕ್ಷ ಪೀರಾ ಹುಸೇನ್ ಹೊಸಳ್ಳಿ, ಬಾಷುಸಾಬ್ ಖತೀಬ್, ಜಮೀರ್ ಖಾದ್ರಿ, ಸಾದಿಕ್ ಅತ್ತಾರ್, ಅಜೀಮ್ ಅತ್ತಾರ್, ಮಾನ್ವಿ ಪಾಷಾ, ಶಹಬುದ್ದೀನ್‌ ನೂರಬಾಷಾ, ಯುಸೂಫಿಯಾ ಮಸ್ಜೀದ್ ಕಮಿಟಿ ಅಧ್ಯಕ್ಷ ಯಜ್ದಾನಿ ಪಾಷಾ, ಲಾಯಖ್ ಅಲಿ, ಸಲೀಂ ಗೊಂಡಬಾಳ ಇದ್ದರು.

ಆಂಬುಲೆನ್ಸ್‌ ಸೌಲಭ್ಯಕ್ಕೆ 9900576586, ಸಿರಾಜ ಕೊಲಕಾರ 9902487961 ಅವರನ್ನು ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.