ADVERTISEMENT

ಭಾರತದ ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್‌ ಪ್ರಜೆ ಕೊಪ್ಪಳದಲ್ಲಿ ಬೈಕ್‌ ಮಗುಚಿ ಸಾವು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 11:35 IST
Last Updated 30 ಅಕ್ಟೋಬರ್ 2023, 11:35 IST
   

ಕೊಪ್ಪಳ: ಭಾರತದ ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್‌ನ ನಾನ್ಸೆಲಿಯೆರ್ ದಿದಿಯೆ (63) ಎಂಬ ವ್ಯಕ್ತಿ ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೈಕ್‌ ಮಗುಚಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಐದು ಸದಸ್ಯರನ್ನು ಒಳಗೊಂಡ ಫ್ರಾನ್ಸ್‌ನ ಸ್ನೇಹಿತರ ತಂಡ ಅ. 24ರಂದು ಚೆನ್ನೈ ಮೂಲಕ ಭಾರತಕ್ಕೆ ಬಂದಿತ್ತು. ದೇಶದ ಪ್ರವಾಸಿ ತಾಣಗಳನ್ನು ಸುತ್ತಲು ಚೆನ್ನೈನಲ್ಲಿ ಬೈಕ್‌ಗಳನ್ನು ಬಾಡಿಗೆ ಪಡೆದುಕೊಂಡು ಹಂಪಿಗೆ ಬಂದಿದ್ದರು. ಇಲ್ಲಿಂದ ಗೋವಾಕ್ಕೆ ಹೋಗುವಾಗ ಈ ಘಟನೆ ನಡೆದಿದೆ ಎಂದು ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೋಡಿಕೊಂಡು ಗೋವಾಕ್ಕೆ ಹೋಗುತ್ತಿದ್ದಾಗ ಮಿತ್ರ ನಾನ್ಸೆಲಿಯೆರ್ ದಿದಿಯೆ ಮೃತಪಟ್ಟಿದ್ದಾನೆ. ಗೋವಾದಿಂದ ಮೈಸೂರಿಗೆ ಹೋಗುವ ಯೋಜನೆ ಹಾಕಿಕೊಂಡಿದ್ದೆವು’ ಎಂದು ತಂಡದ ಸದಸ್ಯ ದಿದಿಯೆ ಮೈಕಲ್ ಮಾನ್ಸೆಲಿಯೆರ್ ತಿಳಿಸಿದರು. ಮೃತದೇಹವನ್ನು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.