ADVERTISEMENT

ಕೊಪ್ಪಳ: ಗಮನ ಸೆಳೆಯುತ್ತಿರುವ ಮೇಷ್ಟ್ರು ಗಣೇಶ

ಸರ್ಕಾರಿ ಶಾಲೆ ಕುರಿತು ಜಾಗೃತಿ ಮೂಡಿಸುತ್ತಿರುವುಕ್ಕೆ ಭಕ್ತರ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 6:55 IST
Last Updated 30 ಆಗಸ್ಟ್ 2025, 6:55 IST
ತಾವರಗೇರಾ ಪಟ್ಟಣದ ತಾವರೇ ಗಜಾನನ ಗೆಳೆಯರ ಬಳಗದಿಂದ ಸರ್ಕಾರಿ ಶಾಲೆ ಮಾದರಿಯ ಕೊಠಡಿ ನಿರ್ಮಿಸಿರುವದು
ತಾವರಗೇರಾ ಪಟ್ಟಣದ ತಾವರೇ ಗಜಾನನ ಗೆಳೆಯರ ಬಳಗದಿಂದ ಸರ್ಕಾರಿ ಶಾಲೆ ಮಾದರಿಯ ಕೊಠಡಿ ನಿರ್ಮಿಸಿರುವದು   

ತಾವರಗೇರಾ: ತಾವರೇ ಗಜಾನನ ಬಳಗವು ಡಾ.ರಾಜಕುಮಾರ ರಸ್ತೆಯಲ್ಲಿ ಪ್ರತಿಷ್ಠಾಪಿಸಿರುವ ಮೇಷ್ಟ್ರು ವೇಷದಲ್ಲಿರುವ ಗಣೇಶ ಮೂರ್ತಿಯು ಗಮನ ಸೆಳೆಯುತ್ತಿದ್ದು, ಭಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸರ್ಕಾರಿ ಶಾಲೆ ಮಾದರಿಯನ್ನು ನಿರ್ಮಿಸಿದ್ದು, ಶಾಲೆಯಲ್ಲಿ ಮಕ್ಕಳ ಕಲಿಕಾ ಮಟ್ಟಕ್ಕೆ ಗೋಡೆಗಳಲ್ಲಿ ಇರುವಂತೆ ಬರಹಗಳು, ಘೋಷಣೆಗಳು, ನಲಿ–ಕಲಿ ಬೋಧನೆ ಉಪಕರಣಗಳ ಕುರಿತು ಚಿತ್ರಗಳನ್ನು ಬಿಡಿಸಲಾಗಿದೆ. ಮಕ್ಕಳಿಗೆ ವರ್ಣ ಮಾಲೆಗಳ ಪಾಠ ಮಾಡುತ್ತಿರುವ ಗಣೇಶ ಮೂರ್ತಿ, ತರಗತಿ ಸಮಯಕ್ಕೆ ಗಂಟೆ ನಾದವಿದೆ. ಈ ಮೂಲಕ ಸಮಾಜದಲ್ಲಿ ಸರ್ಕಾರಿ ಶಾಲೆ ಬಗ್ಗೆ ಇರುವ ಕಲ್ಪನೆ, ಗುಣಮಟ್ಟ, ಸರ್ಕಾರಿ ಶಾಲೆಯಲ್ಲಿ ಕಲಿಯಬೇಕೆಂಬ ಭಾವನೆ ಮೂಡಿಸಲು ಈ ವಿನ್ಯಾಸವನ್ನು ಬಳಗದವರು ಆಯ್ಕೆ ಮಾಡಿಕೊಂಡಿದ್ದಾರೆ.

ಮುಖ್ಯಶಿಕ್ಷಕಿ ನಿಂಬಮ್ಮ ತುಂಬದ ಮಾತನಾಡಿ, ‘ವಿನೂತನ ರೀತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವುದು ಮೆಚ್ಚುವಂಥದ್ದು. ಸರ್ಕಾರಿ ಶಾಲೆಯಂತೆ ಕೊಠಡಿ, ಬೋಧನೆ ಮಾಡುವ ಮೂರ್ತಿ, ಶಾಲೆಯಲ್ಲಿ ಇರುವಂತೆ ಎಲ್ಲಾ ಸಲಕರಣೆ, ಚಿತ್ರಗಳು, ಜನರಿಗೆ ಸರ್ಕಾರಿ ಶಾಲೆಯನ್ನು ಮೆಚ್ಚುವಂತಿದೆ’ ಎಂದರು.

ADVERTISEMENT

ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಗುರುವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಶಾಲೆಯನ್ನು ವೀಕ್ಷಿಸಿ, ಸಂಭ್ರಮಿಸಿದರು. ಸಾರ್ವಜನಿಕರೂ ಸರ್ಕಾರಿ ಶಾಲೆ ಮಾದರಿ ಕೊಠಡಿ, ಪಠ್ಯ ಬೋಧನೆ ಗಣೇಶನ ಮೂರ್ತಿ ದರ್ಶನ ಪಡೆದರು

ತಾವರಗೇರಾ ಪಟ್ಟಣದ ತಾವರೇ ಗಜಾನನ ಗೆಳೆಯರ ಬಳಗದಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳೀಗೆ ಪಠ್ಯ ಬೋಧನೆ ಮಾಡುತ್ತಿರುವ ಗಣೇಶ ಮೂರ್ತಿಪ್ರತಿಷ್ಠಾಪನೆ ಮಾಡಿರುವದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.