ADVERTISEMENT

ಶಿಕ್ಷಣಕ್ಕೆ ಒತ್ತು ನೀಡಿ: ದಢೇಸೂಗೂರು

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 2:58 IST
Last Updated 26 ಜನವರಿ 2021, 2:58 IST
ಶಾಲಾ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ದಢೇಸೂಗೂರು ಭಾಗವಹಿಸಿದ್ದರು
ಶಾಲಾ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ದಢೇಸೂಗೂರು ಭಾಗವಹಿಸಿದ್ದರು   

ಕನಕಗಿರಿ: ಕಲಕೇರಿ ಗ್ರಾಮದ ರಸ್ತೆಯಲ್ಲಿ ನೂತನ ಉಪ ತಹಶೀಲ್ದಾರ್ ಕಚೇರಿ ಕಟ್ಟಡ ಕಾಮಗಾರಿಗೆ ಶಾಸಕ ಬಸವರಾಜ ದಢೇಸೂಗೂರು ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ದಢೇಸೂಗೂರು ಅವರು ಉಪ ತಹಶೀಲ್ದಾರ್ ಕಚೇರಿ ನಿರ್ಮಾಣಕ್ಕೆ ₹18. 84 ಲಕ್ಷ ಅನುದಾನ ಬಿಡುಗಡೆಯಾಗಿದೆ, ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಜಾಗದ ಕೊರತೆ ಇದೆ, ಕನಕಗಿರಿ-ಗಂಗಾವತಿ ರಸ್ತೆಯಲ್ಲಿ ಜಾಗ ನೋಡಿದ್ದು ಪರಿಶೀಲನೆ ನಡೆದಿದೆ ಎಂದು ಅವರು ತಿಳಿಸಿದರು.

ಈ ಭಾಗದ ಜನರ ಬಹು ದಿನದ ಬೇಡಿಕೆಯಾಗಿರುವ ಭೂಮಿ ಕೇಂದ್ರವನ್ನು ತಹಶೀಲ್ದಾರ್ ಕಚೇರಿಯಲ್ಲಿ ಹಾಗೂ.ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಂಗನವಾಡಿ ಕಚೇರಿಯ ನೂತನ ಅಡುಗೆ ಕೊಠಡಿಯನ್ನು ಶಾಸಕ ದಢೇಸೂಗುರು ಅವರು ಉದ್ಘಾಟಿಸಿದರು. ಶಾಸಕರ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಣ್ಣ ಕನಕಪ್ಪ, ಪ್ರಭಾರ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಕುಷ್ಟಗಿ ಮಾತನಾಡಿದರು.

ADVERTISEMENT

ತಾ. ಪಂ ಅಧ್ಯಕ್ಷೆ ಗೌರಮ್ಮ ಜಡಿಯಪ್ಪ, ತಹಶೀಲ್ದಾರ್ ರವಿ ಅಂಗಡಿ, ತಾ.ಪಂ. ಇಒ ಡಾ. ಮೋಹನ್, ಶಿಶು ಯೋಜನಾಧಿಕಾರಿ ಎಸ್. ಶ್ವೇತಾ, ಪ. ಪಂ. ಉಪಾಧ್ಯಕ್ಷೆ ಸರಸ್ವತಿ ಕನಕಪ್ಪ, ಮುಖ್ಯಾಧಿಕಾರಿ ತಿರುಮಲಮ್ಮ, ಸದಸ್ಯರಾದ ರವೀಂದ್ರ ಸಜ್ಜನ್, ಸುಭಾಸ, ಎಸ್ ಡಿಎಂಸಿ ಉಪಾಧ್ಯಕ್ಷ ಪಾಮಣ್ಣ ಅರಳಿಗನೂರು, ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ಮಾಜಿ ಅಧ್ಯಕ್ಷ ಗುರುಸಿದ್ದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.