ಕಾರಟಗಿ: ತುಂಗಭದ್ರಾ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಅಧಿಕವಾಗಿರುವುದರಿಂದ ನದಿಗೆ ನೀರು ಬಿಟ್ಟಿದ್ದು, ನದಿ ಪಾತ್ರದ ತಾಲ್ಲೂಕಿನ ಬೆನ್ನೂರು ಗ್ರಾಮದ ಬಳಿಯ ಹೊಳೆ ಬಸವೇಶ್ವರ ದೇವಾಲಯ ಮುಳುಗಡೆಯಾಗಿದೆ. ದೇವಾಲಯದ ಒಳ ಭಾಗವೆಲ್ಲಾ ನೀರಲ್ಲೇ ಮುಳುಗಿದ್ದು, ಗೋಪುರದ ಭಾಗ ಮಾತ್ರ ನೀರಿನಿಂದ ಮುಕ್ತವಾಗಿದೆ.
ಜಲಾಶಯದಿಂದ ನದಿಗೆ ನೀರು ಬಿಟ್ಟಾಗ ನದಿ ಪಾತ್ರದ ಗ್ರಾಮಗಳ ಜಮೀನುಗಳು ಜಲಾವೃತವಾಗಿ ರೈತರಲ್ಲಿ ಆತಂಕ ಮೂಡುವುದು ಸಹಜ ಎನ್ನುವಂತಾಗಿದೆ. ಜಮೀನುಗಳಿಗೆ ನೀರು ನುಗ್ಗಿದರೆ ಏನೂ ಮಾಡಲಾಗದು ಎಂಬ ಲೆಕ್ಕಾಚಾರದಲ್ಲಿರುವ ರೈತರು ತಮ್ಮ ಪಂಪ್‌ಸೆಟ್‌ಗಳನ್ನು ಬಿಚ್ಚಿ ಬೇರೆಡೆ ಸಾಗಿಸುವುದೂ ಕೂಡ ಸಹಜ ಪ್ರಕ್ರಿಯೆಯಾಗಿದೆ.
ನದಿಗೆ ನೀರು ಬಿಟ್ಟರೆ ತಾಲ್ಲೂಕಿನ ನಂದಿಹಳ್ಳಿ, ಕಕ್ಕರಗೋಳ, ಶಾಲಿಗನೂರು, ಬೆನ್ನೂರು, ಉಳೆನೂರು, ಜಮಾಪುರ, ಕುಂಟೋಜಿ, ಮುಷ್ಟೂರು, ಡಗ್ಗಿ ಗ್ರಾಮದ ರೈತರು ಆತಂಕದಲ್ಲೇ ದಿನದೂಡಬೇಕಾದ ಸ್ಥಿತಿ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.