ADVERTISEMENT

ಗಂಗಾವತಿ | ರಸ್ತೆಯಲ್ಲಿ ₹ 100 ನೋಟು, ಭಯಗೊಂಡ ಜನತೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 11:21 IST
Last Updated 22 ಏಪ್ರಿಲ್ 2020, 11:21 IST
ಗಂಗಾವತಿಯ ಜಯನಗರದ ರಸ್ತೆಯಲ್ಲಿ ಮಂಗಳವಾರ ಬಿದ್ದಿದ್ದ ₹ 100 ಮುಖಬೆಲೆಯ ನೋಟುಗಳನ್ನು ಪೊಲೀಸರು ಸ್ಯಾನಿಟೈಸರ್ ಬಳಸಿ ವಶಕ್ಕೆ ಪಡೆದುಕೊಂಡರು
ಗಂಗಾವತಿಯ ಜಯನಗರದ ರಸ್ತೆಯಲ್ಲಿ ಮಂಗಳವಾರ ಬಿದ್ದಿದ್ದ ₹ 100 ಮುಖಬೆಲೆಯ ನೋಟುಗಳನ್ನು ಪೊಲೀಸರು ಸ್ಯಾನಿಟೈಸರ್ ಬಳಸಿ ವಶಕ್ಕೆ ಪಡೆದುಕೊಂಡರು   

ಗಂಗಾವತಿ: ಇಲ್ಲಿನ ಜಯನಗರದ ರಸ್ತೆಯಲ್ಲಿ ₹ 100 ಮುಖ ಬೆಲೆಯ ಐದು ನೋಟುಗಳನ್ನು ದುಷ್ಕರ್ಮಿಗಳು ಎಸೆದು ಹೋಗಿದ್ದರಿಂದ ನೋಟುಗಳನ್ನು ಕಂಡ ಜನರು ಆತಂಕ್ಕೆ ಒಳಗಾದ ಘಟನೆ ಮಂಗಳವಾರ ನಡೆಯಿತು.

ನಂತರ ಸ್ಥಳಕ್ಕೆ ನಗರ ಠಾಣಾ ಪೊಲೀಸರು ಆಗಮಿಸಿ, ಸ್ಯಾನಿಟೈಜರ್‌ ಬಳಸಿ ನೋಟುಗಳನ್ನು ಸ್ವಚ್ಛಗೊಳಿಸಿ ವಶಪಡಿಸಿಕೊಂಡರು. ಇದೇ ವೇಳೆ ಪಿಐ ವೆಂಕಟಸ್ವಾಮಿ ಸ್ಥಳೀಯರ ಪಂಚರ ಸಮಕ್ಷಮ ನೋಟುಗಳನ್ನು ಜಪ್ತಿ ಮಾಡಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.

ಕಳೆದ ಎರಡು ದಿನಗಳ ಹಿಂದೆ ಇದೇ ರೀತಿ ನಗರದ ಹೇರೂರು ಓಣಿಯಲ್ಲಿ ₹ 10 ಮೊತ್ತದ 10 ನೋಟುಗಳನ್ನು ಕಂಡು ಬಂದಿದ್ದು, ಪೊಲೀಸರು ಅವುಗಳನ್ನೂ ವಶಪಡಿಸಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.