ADVERTISEMENT

ಹನುಮಸಾಗರ: ಹೊಸ ರಸ್ತೆಯಲ್ಲಿ ತೆಗ್ಗು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 11:29 IST
Last Updated 30 ಏಪ್ರಿಲ್ 2022, 11:29 IST
ಹನುಮಸಾಗರ-ಹನುಮನಾಳ ರಸ್ತೆಯನ್ನು ಕಡಿಯಲಾಗಿದೆ
ಹನುಮಸಾಗರ-ಹನುಮನಾಳ ರಸ್ತೆಯನ್ನು ಕಡಿಯಲಾಗಿದೆ   

ಹನುಮಸಾಗರ: ಈಚೆಗೆ ನಿರ್ಮಿಸಲಾಗಿದ್ದ ಹನುಮಸಾಗರ-ಹನುಮನಾಳ ರಸ್ತೆಯನ್ನು ಅಲ್ಲಲ್ಲಿ ಕಡಿದು ಹಾಳು ಮಾಡಲಾಗಿದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ.

‘ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಅಕ್ಕಪಕ್ಕದ ರೈತರು ಹಾಗೂ ಇಟ್ಟಿಗೆ ಭಟ್ಟಿಗಳವರಿಗೆ ಅವಶ್ಯ ಇದ್ದವರು ಈಗಲೇ ಪೈಪ್‌ಲೈನ್‌ ಮಾಡಿಕೊಳ್ಳಿ ಎಂದು ಗುತ್ತಿಗೆದಾರರು ತಿಳಿಸಿದ್ದರು. ಆದರೆ ರಸ್ತೆ ನಿರ್ಮಾಣವಾಗುವವರೆಗೆ ಸುಮ್ಮನೆ ಕುಳಿತು ರಸ್ತೆ ಸಿದ್ಧವಾದ ಕೆಲ ದಿನಗಳಲ್ಲಿಯೇ ಹೀಗೆ ಕಡಿದು ಹಾಕಿರುವುದು ಸರಿಯಲ್ಲ’ ಎಂದು ಜಹಗೀರಗುಡದೂರ ಗ್ರಾಮದ ಬಸವರಾಜ ಬೆನಕನಾಳ ಹಾಗೂ ಗುರಪ್ಪ ಕಾಟಾಪೂರ ಹೇಳಿದರು.

15 ಕಿ.ಮೀ ಉದ್ದದ ಹನುಮಸಾಗರ–ಹನುಮನಾಳ ರಸ್ತೆಯ ಒಂಭತ್ತು ಕಡೆ ಕಡಿದು ಹಾಳು ಮಾಡಲಾಗಿದೆ.

ADVERTISEMENT

ರಸ್ತೆಯನ್ನು ಕಡಿಯುವಾಗ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ತೆಗೆದುಕೊಳ್ಳುವುದು ಕಡ್ಡಾಯವಾಗಿದ್ದರೂ ಯಾರನ್ನೂ ಕೇಳದ, ಯಾವ ಅನುಮತಿಯನ್ನೂ ಪಡೆದುಕೊಂಡಿಲ್ಲ.

ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂಥ ಕೃತ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ವಾಹನ ಚಾಲಕರು ನೋವಿನಿಂದ ಹೇಳಿದರು.

ಮನಬಂದಂತೆ ರಸ್ತೆ ಕಡದಿರುವುದರಿಂದ ರಾತ್ರಿ ಸಮಯದಲ್ಲಿ ವಾಹನ ಚಾಲಕರಿಗೆ ಕಿರಿ ಕಿರಿಯಾಗುತ್ತಿದ್ದು ಕೂಡಲೇ ದುರಸ್ತಿ ಕಾರ್ಯ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.