ADVERTISEMENT

ಕನಕಗಿರಿ: ಅಕ್ರಮ ಮರಳು ಸ್ಥಳದ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 4:13 IST
Last Updated 2 ಫೆಬ್ರುವರಿ 2026, 4:13 IST
ಕನಕಗಿರಿ ತಾಲ್ಲೂಕಿನ ಕ್ಯಾರಿಹಾಳ ಗ್ರಾಮದ ಅಕ್ರಮ ಮರಳು ದಂಧೆಯ ಸ್ಥಳಕ್ಕೆ ಅಧಿಕಾರಿಗಳು ಭಾನುವಾರ ಸಂಜೆ ಹಠಾತ್ ದಾಳಿ ಮಾಡಿದರು
ಕನಕಗಿರಿ ತಾಲ್ಲೂಕಿನ ಕ್ಯಾರಿಹಾಳ ಗ್ರಾಮದ ಅಕ್ರಮ ಮರಳು ದಂಧೆಯ ಸ್ಥಳಕ್ಕೆ ಅಧಿಕಾರಿಗಳು ಭಾನುವಾರ ಸಂಜೆ ಹಠಾತ್ ದಾಳಿ ಮಾಡಿದರು   

ಕನಕಗಿರಿ: ತಾಲ್ಲೂಕಿನ ಸಂಕನಾಳ, ಕ್ಯಾರಿಹಾಳ, ಬುನ್ನಟ್ಟಿ ಗ್ರಾಮಗಳಲ್ಲಿ ನಡೆಯುತ್ತಿದ್ದ ಅನಧಿಕೃತ ಮರಳು ಗಣಿಗಾರಿಕೆಯ ಪ್ರದೇಶಗಳ ಮೇಲೆ ತಾಲ್ಲೂಕು ಮರಳು ಸಮಿತಿ ಇಲಾಖೆಗಳ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಕಂದಾಯ, ಗಣಿ, ಪೊಲೀಸ್, ಪಂಚಾಯತ್‌ ರಾಜ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಅಕ್ರಮವಾಗಿ ಮರಳು ತೊಳೆಯಲು ಉಪಯೋಗಿಸುತ್ತಿದ್ದ ಪೈಪ್‌ ಮತ್ತು ಪುಟ್ಬಾಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ವಿವಿಧ ಸ್ಥಳಗಳಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಿದ್ದ ಒಟ್ಟು 205 ಟನ್ ಮರಳು ವಶಕ್ಕೆ ಪಡೆದಿದ್ದು ಜಿಲ್ಲಾ ಮರಳು ಸಮಿತಿ ನಿಗದಿಪಡಿಸಿರುವ ₹1.46 ಲಕ್ಷ ವಸೂಲಿ ಮಾಡಿ ಸರ್ಕಾರದ ಖಾತೆಗೆ ಜಮಾವಣೆ ಮಾಡಲಾಗಿದೆ ಎಂದು ತಹಶೀಲ್ದಾರ್ ವಿಶ್ವನಾಥ ಮುರುಡಿ ತಿಳಿಸಿದರು.

ADVERTISEMENT

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ನಾಗರಾಜ, ಲೋಕೋಪಯೋಗಿ ಇಲಾಖೆಯ ಎಇಇ ವಿಶ್ವನಾಥ, ತಾ.ಪಂ ಪ್ರಭಾರ ಇಓ ಕೆ. ರಾಜಶೇಖರ, ಗ್ರಾಮ ಆಡಳಿತ ಅಧಿಕಾರಿ ಮೆಹಬೂಬ, ಎಎಸ್ಐ ನಿಂಗಪ್ಪ ಹೂಗಾರ, ಬೈಲಾಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.