ADVERTISEMENT

ಕೊಪ್ಪಳ | ನಾಲ್ಕು ಜನ ಲೇಖಕರಿಗೆ ದತ್ತಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 5:27 IST
Last Updated 6 ಫೆಬ್ರುವರಿ 2026, 5:27 IST
ಪಿ.ಎಸ್‌. ಅಮರದೀಪ್‌
ಪಿ.ಎಸ್‌. ಅಮರದೀಪ್‌   

ಕೊಪ್ಪಳ: ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ತಾಲ್ಲೂಕು ಘಟಕವು ದಿ. ಮರಿಗೌಡ ಮಲ್ಲನಗೌಡರ ಅವರ ಹೆಸರಿನಲ್ಲಿ ಸಾಹಿತಿ ಮಹಾಂತೇಶ ಮಲ್ಲನಗೌಡರ ಅವರು ನೀಡುವ ಜಿಲ್ಲಾ ಲೇಖಕರ ಬರಹಗಳಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ. 

ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿಯಾಗಿ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿರುವ     ಕೊಪ್ಪಳದ ಪಿ.ಎಸ್‌. ಅಮರದೀಪ್ ಅವರ ಮರಳಿಮನ ಸಾಗಿದೆ ಕೃತಿ, ಕೊಪ್ಪಳದ ಸಾಹಿತಿ ಶಿವನಗೌಡ ಪೊಲೀಸ್‌ ಪಾಟೀಲ್ ಅವರ ಛಲಬಿಡದ ಸಾಧಕಿಯರು ಸಂಕಲನ ಪ್ರಶಸ್ತಿ ಬಾಚಿಕೊಂಡಿವೆ.  

ಜಿಲ್ಲೆಯ ಬರಹಗಾರ್ತಿಯರಿಗೆ ಅಂದಮ್ಮ ಮರಿಗೌಡ ಮಲ್ಲನಗೌಡರ ಅವರ ಹೆಸರಿನಲ್ಲಿ ನೀಡುವ ದತ್ತಿ ಪ್ರಶಸ್ತಿಗೆ ಲೇಖಕಿ ಹಾಗೂ ಶಿಕ್ಷಕಿ ಗಂಗಾವತಿಯ ಜಯಶ್ರೀ ಹಕ್ಕಂಡಿ ಅವರ ಉಲಿದಷ್ಟೇ ದನಿ ಕವಿತೆಗಳ ಸಂಕಲನ ಮತ್ತು ಶಿಕ್ಷಕಿ ಕುಕನೂರಿನ ಗೀತಾ ಎನ್. ಮಲ್ಲನಗೌಡ ಅವರ ವಚನಸಿರಿ ಆಧುನಿಕ ವಚನಗಳ ಸಂಕಲನಗಳು ಆಯ್ಕೆಯಾಗಿವೆ.

ADVERTISEMENT

‘ಪ್ರತಿ ಸಲ ಒಬ್ಬರನ್ನೇ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಎರಡೂ ಪ್ರಶಸ್ತಿಗಳಿಗೆ ತಲಾ ಇಬ್ಬರು ಆಯ್ಕೆಯಾಗಿರುವುದು ವಿಶೇಷ’ ಎಂದು ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ತಿಳಿಸಿದ್ದಾರೆ.

ಶಿವನಗೌಡ ಪೋಲೀಸ್ ಪಾಟೀಲ್
ಗೀತಾ ಮಲ್ಲನಗೌಡ
ಜಯಶ್ರೀ ಹಕ್ಕಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.