ADVERTISEMENT

ಕೊಪ್ಪಳ ಬಂದ್‌ನಲ್ಲಿ ಭಾಗಿಯಾಗಿದ್ದ ಶಾಸಕ ರಾಘವೇಂದ್ರ ಹಿಟ್ನಾಳಗೆ ತೀವ್ರ ತರಾಟೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 8:25 IST
Last Updated 24 ಫೆಬ್ರುವರಿ 2026, 8:25 IST
<div class="paragraphs"><p>ಕೊಪ್ಪಳ ಬಂದ್‌ನಲ್ಲಿ ಭಾಗಿಯಾಗಿದ್ದ ಶಾಸಕ ರಾಘವೇಂದ್ರ ಹಿಟ್ನಾಳಗೆ ತೀವ್ರ ತರಾಟೆ</p></div>

ಕೊಪ್ಪಳ ಬಂದ್‌ನಲ್ಲಿ ಭಾಗಿಯಾಗಿದ್ದ ಶಾಸಕ ರಾಘವೇಂದ್ರ ಹಿಟ್ನಾಳಗೆ ತೀವ್ರ ತರಾಟೆ

   

ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆಗೆ ವಿರೋಧಿಸಿ ಕೊಪ್ಪಳ ‌ಬಂದ್ ಕರೆ ನೀಡಲಾಗಿದ್ದು, ಮಂಗಳವಾರ ಮೆರವಣಿಗೆ ಸಮಯದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಅವರನ್ನು ಜನ ತರಾಟೆಗೆ ತೆಗೆದುಕೊಂಡರು.

ಗವಿಮಠದ ಆವರಣದಿಂದ ಆರಂಭವಾದ ಮೆರವಣಿಗೆ ಅಶೋಕ ವೃತ್ತದ ತನಕ ನಡೆಯಿತು. ಮಾಲಿನ್ಯದ ವಿರುದ್ದದ ಭಿತ್ತಿಚಿತ್ರಗಳನ್ನು ಹೋರಾಟ ನಿರತರು ಪ್ರದರ್ಶಿಸಿದರು.

ADVERTISEMENT

ಈ ವೇಳೆ ಸಾರ್ವಜನಿಕರು ಕಾರ್ಖಾನೆಗಳ ಮಾಲಿನ್ಯದ ಬಗ್ಗೆ ಸದನದಲ್ಲಿ ಒಮ್ಮೆಯೂ ಧ್ವನಿ ಎತ್ತದೇ ಕೊಪ್ಪಳ ಬಂದ್ ಹೋರಾಟದಲ್ಲಿ ಭಾಗಿಯಾಗಿದ್ದು ಯಾಕೆ ಎಂದು ರಾಘವೇಂದ್ರ ಹಿಟ್ನಾಳ ಜೊತೆ ವಾಗ್ವಾದ ನಡೆಸಿದರು. ಮಾತಿನ‌ ಚಕಮಕಿಯೂ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ಹೋರಾಟ ನಿರತರನ್ನು ಸಮಾಧಾನ ಪಡಿಸಿದರು. ಜನರ ವಿರೋಧದ ನಡುವೆಯೂ ಹಿಟ್ನಾಳ ಪೂರ್ಣ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.