
ಕೊಪ್ಪಳ: ತಾಲ್ಲೂಕಿನ ಬಸಾಪುರ ಹಾಗೂ ಹಾಲವರ್ತಿ ಸಮೀಪ ಪ್ರಾರಂಭಗೊಳ್ಳಲಿರುವ ಬಲ್ಡೋಟಾ ಕಂಪನಿಗೆ ಸರ್ಕಾರ 2006-07ರಲ್ಲಿ ಬಲವಂತರಿಂದ ರೈತರ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಂಡಿದೆ ಎಂದು ಕೊಪ್ಪಳದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಭೂಮಿ ಕಳೆದುಕೊಂಡ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕೆಐಡಿಬಿ ಮೂಲಕ ಜಿಲ್ಲಾಧಿಕಾರಿಗಳಿಂದ ರೈತರ ಜಮೀನನ್ನು ಒತ್ತಾಯ, ದೌರ್ಜನ್ಯದಿಂದ ಪಡೆದುಕೊಂಡಿದೆ. ಆಗ ಫಲವತ್ತತೆಯಿಂದ ಕೂಡಿದ ನಮ್ಮ ಜಮೀನನ್ನು ಏಕಾಏಕಿ ವಶಕ್ಕೆ ಪಡೆದುಕೊಳ್ಳಲಾಯಿತು. ಕಾರ್ಖಾನೆ ಸ್ಥಾಪಿಸುವ ಉದ್ದೇಶ ಇಟ್ಟುಕೊಂಡು ಭೂಸ್ವಾದೀನ ಪಡಿಸಿಕೊಂಡಿದೆ. ಆದರೆ ನಮಗೆ 20 ವರ್ಷಗಳಿಂದ ನ್ಯಾಯ ಸಿಕ್ಕಿಲ್ಲ. ಉದ್ಯೋಗ ಮಾಡಲು ಕಾರ್ಖಾನೆ ಪ್ರಾರಂಭವಾಗಿಲ್ಲ, ರೈತರ ಜೊತೆಗೆ ಸರ್ಕಾರ ಆಟವಾಡುತ್ತಿದೆ ಎಂದು ಹೋರಾಟ ನಿರತರು ಹೇಳಿದರು.
ರೈತ ಮುಖಂಡರಾದ ಹನುಮಂತಪ್ಪ ಕೌದಿ, ಕಾಮಣ್ಣ ಕಂಬಳಿ ನಾಗರಾಜ ಗುರಿಕಾರ, ಕೆಂಚಪ್ಪ ಹಾಲವರ್ತಿ, ನಾಗರಾಜ್ ಕೌದಿ, ಗವಿಸಿದ್ದಪ್ಪ ರೆಡ್ಡಿ, ಮುತ್ತುಗೌಡ, ನಾಗೇಂದ್ರ, ದೇವಪ್ಪ ಹಲಗೇರಿ, ಮಲ್ಲಪ್ಪ ಗೊರವರ, ಗುರುಲಿಂಗಪ್ಪ, ಮಂಜುನಾಥ ಇಂದರಗಿ, ನಾಗರಾಜ ಗುಳದಳ್ಳಿ, ಶಿವರಾಜ ಬಳ್ಳಾರಿ, ಪ್ರಕಾಶ ದೊಡ್ಡಮನೆ, ಶಿವರಾಜ ಅಂಚಲಪ್ಪ, ಯೋಗೇಶ್ ಹಲಗೇರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.