ADVERTISEMENT

ಕೊಪ್ಪಳ | ‘ಪಾಠ ಹೇಳಿಕೊಡುವುದಷ್ಟೇ ಶಿಕ್ಷಕರ ಕರ್ತವ್ಯವಲ್ಲ’: ಪ್ರೊ. ಬಿ.ಕೆ. ರವಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 6:26 IST
Last Updated 6 ಸೆಪ್ಟೆಂಬರ್ 2025, 6:26 IST
<div class="paragraphs"><p>ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು.</p></div>

ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು.

   

ಕುಕನೂರು: ‘ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವುದಷ್ಟೇ ಶಿಕ್ಷಕರ ಕರ್ತವ್ಯವಲ್ಲ. ಅವರಲ್ಲಿ ಜೀವನ ಮೌಲ್ಯಗಳನ್ನು ಬೆಳೆಸುವುದು, ನೈತಿಕ ದಾರಿ ತೋರಿಸುವುದು ಹಾಗೂ ಸಮಾಜಮುಖಿ ಚಿಂತನೆ ರೂಢಿಸುವುದೇ ಗುರುಗಳ ನಿಜವಾದ ಹೊಣೆಗಾರಿಕೆ’ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತಳಕಲ್ ಗ್ರಾಮದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಗೌರವ ಸಲ್ಲಿಸಿ ಅವರು ಮಾತನಾಡಿದರು.

ADVERTISEMENT

‘ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಜ್ಞಾನವಷ್ಟೇ ಅಲ್ಲ, ಜೀವನೋಪಾಯದ ಕೌಶಲಗಳನ್ನು ಕಲಿಯಬೇಕಿದೆ. ಅದನ್ನು ಸಾಧಿಸಲು ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸ್ನೇಹಪೂರ್ಣವಾಗಿ ಬೆರೆತು, ಹೊಸ ತಂತ್ರಜ್ಞಾನ ಮತ್ತು ಸಮಾಜದ ಅಗತ್ಯಗಳಿಗೆ ತಕ್ಕಂತೆ ಪಾಠ ಮಾಡಬೇಕು. ಗುರುಗಳು ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ನಾಗರಿಕರ ಗುಣ ಬೆಳೆಸಿದರೆ, ದೇಶದ ಭವಿಷ್ಯ ಭದ್ರವಾಗುತ್ತದೆ’ ಎಂದರು.

ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿ ಮಾತನಾಡಿ, ‘ಶಿಕ್ಷಕರು ಸಮಾಜದ ಮೌಲ್ಯ ಕಾಪಾಡುವವರಾಗಿದ್ದಾರೆ. ನಿಜವಾದ ಶಿಕ್ಷಕನು ವಿದ್ಯಾರ್ಥಿಗಳ ಜೀವನವನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತಾನೆ. ಅವರ ತ್ಯಾಗ, ಶ್ರಮ, ಸೇವಾಭಾವವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದರು. ಪ್ರವೀಣ್ ಪಾಟೀಲ, ಅಯ್ಯಪ್ಪ, ಸಂತೋಷಕುಮಾರ ಎಚ್.ಕೆ., ರೋಹಿತ್‌ಕುಮಾರ, ಅಲ್ತಾಪ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.