
ಕೆ.ಆರ್.ಪೇಟೆ: ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮತ್ತು ಪ್ರಮುಖ ರಸ್ತೆಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು.
ಪುರಸಭಾ ಸದಸ್ಯ ಡಿ. ಪ್ರೇಂಕುಮಾರ್ ಪ್ರಮುಖರಾದ ರಾಜಯ್ಯ, ಬಸ್ತಿ ರಂಗಪ್ಪ, ಊಚನಹಳ್ಳಿ ನಟರಾಜು, ಸಿಂಧಘಟ್ಟ ಸೋಮಸುಂದರ್, ನಾಟನಹಳ್ಳಿ ಸೋಮರಾಜು, ಮಾಂಬಳ್ಳಿ ಜಯರಾಂ, ಮಂಜುನಾಥ್, ಬಂಡಿಹೊಳೆ ರಮೇಶ್,ಮುದುಗೆರೆ ಮಹೇಂದ್ರ, ಗಂಜಿಗೆರೆ ಚಲುವಯ್ಯ, ಮಾದೇಶ್, ಬಂಡಿಹೊಳೆ ಕೃಷ್ಣಮೂರ್ತಿ, ಹರಿಹರಪುರ ನರಸಿಂಹ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.