ADVERTISEMENT

ಕೆ.ಆರ್.ಪೇಟೆ: ವಿದ್ಯಾರ್ಥಿನಿಯರಿಗೆ ಆಯುಷ್ ಔಷಧ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 13:44 IST
Last Updated 9 ಡಿಸೆಂಬರ್ 2024, 13:44 IST
ಕೆ.ಆರ್.ಪೇಟೆಯ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಯದಲ್ಲಿ  ಶಾಸಕ ಎಚ್.ಟಿ. ಮಂಜು ವಿದ್ಯಾರ್ಥಿಗಳಿಗೆ ಆಯುಷ್ ಔಷಧಗಳ ಕಿಟ್ ವಿತರಣೆ ಮಾಡಿದರು. ಅಧಿಕಾರಿಗಳಾದ ದಿವಾಕರ್, ಡಾ.ಆಶಾಲತಾ, ಡಾ.ಲೋಕೇಶ್  ಇದ್ದರು.

ಕೆ.ಆರ್.ಪೇಟೆ: ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಆಯುಷ್ ಮತ್ತು ಸಮಾಜಕಲ್ಯಾಣ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿನಿಯರಿಗೆ ಆಯುಷ್ ಔಷಧಗಳ ಕಿಟ್‌ಗಳನ್ನು ಶಾಸಕ ಎಚ್.ಟಿ. ಮಂಜು ವಿತರಿಸಿದರು.

‘ಆಯುರ್ವೇದ ಔಷಧ ನಮ್ಮ ಪರಂಪರೆಯಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯ ಸಂವರ್ಧನೆಗೊಳಿಸಿ ಕ್ರಿಯಾಶೀಲತೆ ಹಾಗೂ ಲವಲವಿಕೆಯನ್ನು ತುಂಬಲು ಇದು ನೆರವಾಗುತ್ತದೆ. ಚ್ಯವನಪ್ರಾಶ, ಸಿರಿಧಾನ್ಯಗಳ ಮಿಶ್ರಣದ ಮಿಲ್ಲೆಟ್ ಪೌಡರ್, ನೆಲ್ಲಿಕಾಯಿ, ಕೊಬ್ಬರಿ ಎಣ್ಣೆ ಹಾಗೂ ಭೃಂಗರಾಜ್ ಮಿಶ್ರಣದ ಹೇರ್ ಆಯಿಲ್, ಜಂತುಹುಳು ನಿರೋಧಕ ಮಾತ್ರೆಗಳನ್ನು ವಿತರಿಸಲಾಗುತ್ತದೆ’ ಎಂದರು.

ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಆಶಾಲತಾ, ತಾಲ್ಲೂಕು ಆಯುಷ್ ನೋಡಲ್ ವೈದ್ಯಾಧಿಕಾರಿ ಡಾ. ಲೋಕೇಶ್, ತಜ್ಞ ವೈದ್ಯರಾದ ಡಾ. ಚಂದ್ರಶೇಖರ್, ಡಾ. ಪವಿತ್ರ, ಡಾ.ಯೋಜನ್, ಡಾ.ಸುಬ್ರಹ್ಮಣ್ಯ ಮತ್ತಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.