ಮಂಡ್ಯ: ನಾಗಮಂಗಲದ ಕಲ್ಲುದೇವನಹಳ್ಳಿಗೆ ತೆರಳಿ ವಾಪಸ್ಸಾಗುವಾಗ ಕಾರು ನಿಲ್ಲಿಸಿ ತನ್ನ ಕಷ್ಟ ತೋಡಿಕೊಂಡ ವೃದ್ಧೆಯೊಬ್ಬರಿಗೆ ಸಹಾಯ ಮಾಡುವ ಭರವಸೆ ನೀಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಾಗಮಂಗಲದ ಕಲ್ಲುದೇವನಹಳ್ಳಿಗೆ ಹೋಗಿಬರುವಾಗ ವೃದ್ಧೆಯೊಬ್ಬರು ಕೈ ಅಡ್ಡ ಹಾಕಿ ನನ್ನ ಕಾರು ನಿಲ್ಲಿಸಿದರು. ಏನೆಂದು ವಿಚಾರಿಸುವ ಹೊತ್ತಿಗೆ ತನ್ನ ಕಷ್ಟವನ್ನೆಲ್ಲ ನನ್ನೆದುರು ಹಂಚಿಕೊಂಡರು. ನನ್ನ ಬಳಿ ಹೇಳಿಕೊಂಡರೆ ಕಷ್ಟ ನೀಗಬಹುದು ಎಂಬುದು ಆಕೆಯ ವಿಶ್ವಾಸ. ಕುಮಾರಸ್ವಾಮಿ ನಮ್ಮ ಕಷ್ಟ ನಿವಾರಿಸಬಲ್ಲ ಎಂಬುದು ಇಂಥ ಅಸಂಖ್ಯ ಜನರ ಅಭಿಪ್ರಾಯವೂ ಹೌದು ಎಂದಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, ವೃದ್ಧೆಯ ನಿರೀಕ್ಷೆಯಂತೆ ಆಕೆಯ ಮಗಳಿಗೆ ಉದ್ಯೋಗ ಕೊಡಿಸುವ ಭರವಸೆಯನ್ನು ನಾನೂ ನೀಡಿದ್ದೇನೆ. ಜನರ ಇಂಥ ನಿರೀಕ್ಷೆಗಳು, ನಂಬಿಕೆಗಳು, ಅವರಿಗೆ ನೆರವಾಗಬೇಕು ಎಂಬ ನನ್ನ ಅದಮ್ಯ ಹಂಬಲವೇ ನಾನು ಇನ್ನೂ ರಾಜಕೀಯವಾಗಿ ಉಳಿಯುವಂತೆ ಮಾಡಿದೆ. ಜನರ ಈ ಮಟ್ಟದ ಪ್ರೀತಿ, ವಿಶ್ವಾಸ, ನಂಬಿಕೆ, ನಿರೀಕ್ಷೆಗಳಿಗೆ ನಾನು ಸದಾ ಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.