ADVERTISEMENT

ಮೈತ್ರಿ ಪಕ್ಷದ ಪಾದಯಾತ್ರೆ ನನಗೆ ವರವಿದ್ದಂತೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2024, 13:08 IST
Last Updated 5 ಆಗಸ್ಟ್ 2024, 13:08 IST
   

ಮದ್ದೂರು: ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ನಡೆಸುತ್ತಿರುವ ಪಾದಯಾತ್ರೆ ನನಗೆ ವರ ಕೊಟ್ಟಂತೆ ಆಗಿದೆ. ಅವರ ಅಕ್ರಮ, ಭ್ರಷ್ಟಾಚಾರಗಳನ್ನು ಜನರ ಮುಂದೆ ತೆರೆದಿಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. 

ಪಟ್ಟಣದಲ್ಲಿ ಸೋಮವಾರ ‘ಜನಾಂದೋಲನ ಸಮಾವೇಶ’ ಮುಗಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ನನ್ನ ವಿರುದ್ಧ ಸಿಬಿಐ, ಇಡಿ ಬಿಟ್ಟು ಏನಾದರೂ ಸಿಗುತ್ತದೆ ಅಂತ ಜಾಲಾಡಿದರು. ಇದರಿಂದ ನನಗೇನೂ ತೊಂದರೆ ಆಗಲಿಲ್ಲ. ನನ್ನದು ತೆರೆದ ಪುಸ್ತಕ ಎಂದರು. 

ಎಚ್‌.ಡಿ.ಕುಮಾರಸ್ವಾಮಿ ಅವರು ನನ್ನ ಸವಾಲನ್ನು ಸ್ವೀಕರಿಸಿ, ಚರ್ಚೆ ಮಾಡಲು ದಿನಾಂಕ ನಿಗದಿಪಡಿಸಲಿ. ಅವರು ಅಸೆಂಬ್ಲಿಗೆ ಬರೋಕೆ ಆಗಲ್ಲ. ಹೀಗಾಗಿ ಅವರ ಸಹೋದರನನ್ನು ಚರ್ಚೆಗೆ ಕಳುಹಿಸಲಿ ಎಂದು ಆಹ್ವಾನ ನೀಡಿದರು. 

ADVERTISEMENT

ಪೌರಾಡಳಿತ ಇಲಾಖೆಯಲ್ಲಿ ಒಂದೇ ದಿನ 20 ಅಧಿಕಾರಿಗಳ ವರ್ಗಾವಣೆ ಕುರಿತ ಪತ್ರಕರ್ತರ ಪ್ರಶ್ನೆಗೆ, ‘ನನ್ನ ಇಲಾಖೆಗೆ ಸಂಬಂಧಪಟ್ಟಂತೆ 100 ನೌಕರರನ್ನು ವರ್ಗಾವಣೆ ಮಾಡಬಹುದು. ಇದರಲ್ಲಿ ಯಾವುದೇ ಲಂಚದ ಆರೋಪ ಬರಲ್ಲ. ಮಂತ್ರಿಗಳಿಗೆ ಅವಕಾಶ ಇರುತ್ತದೆ. ಇದು ಆಡಳಿತಾತ್ಮಕ ನಿರ್ಧಾರ’ ಎಂದು ಸಮರ್ಥಿಸಿಕೊಂಡರು. 

‘ನಾನು ಯಾವುದೇ ದಲಿತ ಕುಟುಂಬವನ್ನು ಹಾಳು ಮಾಡಿಲ್ಲ. ಬೇಕಾದರೆ ಪಟ್ಟಿ ಕೊಡಲಿ’ ಎಂದು ಡಿ.ಕೆ.ಶಿವಕುಮಾರ್‌ ಅವರು ವಿರೋಧಪಕ್ಷದವರ ಟೀಕೆಗೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.