ADVERTISEMENT

ಮದ್ದೂರು ಪೊಲೀಸ್‌ ವಿಶ್ರಾಂತಿ ಗೃಹದಲ್ಲಿ ಕಾನ್‌ಸ್ಟೆಬಲ್‌ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 13:43 IST
Last Updated 7 ಜನವರಿ 2026, 13:43 IST
<div class="paragraphs"><p>ಮೃತ ರಮೇಶ್‌</p></div>

ಮೃತ ರಮೇಶ್‌

   

ಮದ್ದೂರು: ನಗರದ ಪೊಲೀಸ್‌ ಠಾಣೆಯ ಹಿಂಭಾಗದ ಪೊಲೀಸ್‌ ವಿಶ್ರಾಂತಿ ಗೃಹದಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮೂಲದ ರಮೇಶ್ (35) ಆತ್ಮಹತ್ಯೆ ಮಾಡಿಕೊಂಡವರು. 

ADVERTISEMENT

‘ಪತಿ ರಮೇಶ್ ಅವರಿಗೆ ಕಾನ್‌ಸ್ಟೆಬಲ್‌ ಮಹೇಶ್ ಎಂಬುವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಹಾಗೂ ಹಲವು ಬಾರಿ ಗಲಾಟೆ ಕೂಡಾ ಮಾಡಿದ್ದರು. ನನ್ನ ಗಂಡನ ಸಾವಿಗೆ ಕಾರಣರಾಗಿರುವ ಮಹೇಶ್‌ ವಿರುದ್ಧ ಸೂಕ್ತ ತನಿಖೆ ನಡೆಸಿ’ ಎಂದು ಮೃತ ರಮೇಶ್‌ ಅವರ ಪತ್ನಿ ಪುಷ್ಪಲತಾ ದೂರು ನೀಡಿದ್ದಾರೆ. 

ರಮೇಶ್ ಮತ್ತು ಮಹೇಶ್ ಇಬ್ಬರೂ ನಗರದ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಹಾಗೂ ಇಬ್ಬರೂ ಪೊಲೀಸ್ ವಸತಿಗೃಹದ ನಿವಾಸಿಗಳಾಗಿದ್ದರು ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.