ADVERTISEMENT

ಮಂಡ್ಯ: ಡಿ.28ರಂದು ಮೈಷುಗರ್‌ ಶಾಲೆ ಅಮೃತೋತ್ಸವ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 12:28 IST
Last Updated 25 ಡಿಸೆಂಬರ್ 2024, 12:28 IST
ಸಿ.ಡಿ.ಗಂಗಾಧರ್
ಸಿ.ಡಿ.ಗಂಗಾಧರ್   

ಮಂಡ್ಯ: ಮೈಷುಗರ್ ಆಡಳಿತ ಮಂಡಳಿ, ಮೈಷುಗರ್ ಪ್ರೌಢಶಾಲೆ ಶ್ರೇಯೋಭಿವೃದ್ಧಿ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಡಿ.28ರಂದು ಬೆಳಿಗ್ಗೆ 9 ಗಂಟೆಗೆ ಮೈಷುಗರ್ ಪ್ರೌಢಶಾಲಾ ಆವರಣದಲ್ಲಿ ಅಮೃತ ಮಹೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಹೇಳಿದರು.

ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸುವರು ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ ಆಶಯ ಭಾಷಣ ಮಾಡುವರು. ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಅವರು ಅಮೃತಧಾರೆ ಸಂಚಿಕೆ ಬಿಡುಗಡೆ ಮಾಡುವರು. ನಿವೃತ್ತ ಮುಖ್ಯ ಶಿಕ್ಷಕ ಟಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡುವರು. ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಹಿರಿಯ ಸಿವಿಲ್‌ ನ್ಯಾಯಾಧೀಶ ಎಚ್.ಕೆ.ಉಮೇಶ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್. ರಾಜಣ್ಣ, ವೈದ್ಯ ಡಾ.ಎಂ.ಮಾದಯ್ಯ, ನಿವೃತ್ತ ಮುಖ್ಯಶಿಕ್ಷಕ ಎಂ.ಎಸ್. ಮನ್ನಾರ್ ಕೃಷ್ಣರಾವ್, ಪಿ.ಎಸ್.ರವಿ, ಚಿಕ್ಕಲಿಂಗಯ್ಯ, ಸಿ.ರಾಜು, ಪ್ರೊ.ಗುಬ್ಬಯ್ಯ, ಎಂ.ಕೆ.ನಾಗೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ವಿವರಿಸಿದರು.

ADVERTISEMENT

ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಮೈಷುಗರ್ ಎಂ.ಡಿ.ಬಿ.ಎನ್.ವೀಣಾ, ವಿಧಾನ ಪರಿಷತ್‌ ಸದಸ್ಯ ಕೆ.ವಿವೇಕಾನಂದ, ಶಾಸಕ ಎಚ್.ಟಿ.ಮಂಜು, ನಗರಸಭೆ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಅರುಣ್‌ಕುಮಾರ್ ಆಗಮಿಸುವರು ಎಂದರು.

ವಿಚಾರ ಗೋಷ್ಠಿ: 

ಮಧ್ಯಾಹ್ನ 2 ಗಂಟೆಗೆ ಶೈಕ್ಷಣಿಕ ವಿಚಾರಗೋಷ್ಠಿಯ ನಡೆಯಲಿದೆ. ವಿಶ್ರಾಂತ ಪ್ರಾಂಶುಪಾಲ ಎಸ್.ಬಿ.ಶಂಕರೇಗೌಡ ಅಧ್ಯಕ್ಷತೆ ವಹಿಸುವರು. ನಿವೃತ್ತ ಮುಖ್ಯಶಿಕ್ಷಕ ಎಂ.ಎಸ್.ಮನ್ನಾರ್ ಕೃಷ್ಣರಾವ್ ವಿಷಯ ಮಂಡಿಸುವರು. ವೈದ್ಯ ಡಾ.ಎಂ.ಮಾದಯ್ಯ, ಶಿಕ್ಷಣ ತಜ್ಞ ಎನ್.ಎನ್.ಪ್ರಹ್ಲಾದ್, ವಿಶ್ರಾಂತ ಪ್ರಾಂಶುಪಾಲ ಕೆಂಪಯ್ಯ ಭಾಗವಹಿಸುವರು ಎಂದು ತಿಳಿಸಿದರು.

ಸಮಾರೋಪ: 

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಮಾರೋಪ ಭಾಷಣ ಮಾಡುವರು. ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಅಧ್ಯಕ್ಷತೆ ವಹಿಸುವರು. ಶಾಸಕ ಪಿ.ರವಿಕುಮಾರ್ ಅವರು ಬಹುಮಾನ ವಿತರಿಸುವರು. ಶಿವಲಿಂಗಯ್ಯ ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವರು ಎಂದರು.

ಶಾಸಕರಾದ ಕೆ.ಎಂ. ಉದಯ್, ಪಿ.ಎಂ. ನರೇಂದ್ರಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್‌ ಸದಸ್ಯರಾದ ದಿನೇಶ್ ಗೂಳೀಗೌಡ, ಮಧು ಜಿ. ಮಾದೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗೀಗೌಡ, ಮಾಜಿ ಶಾಸಕ ಎಂ.ಶ್ರೀನಿವಾಸ್ ಭಾಗವಹಿಸುವರು ಭಾಗವಹಿದ್ದರು.

ಮುಖಂಡರಾದ ಟಿ.ರಮೇಶ್‌, ಬಿ.ಟಿ.ಜಯರಾಂ, ಸತ್ಯನಾರಾಯಣರಾವ್, ಮುಖ್ಯಶಿಕ್ಷಕಿ ಟಿ.ಎಚ್‌.ವಿಶಾಲಾಕ್ಷಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.