ADVERTISEMENT

Ranganathittu Bird Sanctuary: ಪ್ರವೇಶ, ದೋಣಿ ವಿಹಾರ ಶುಲ್ಕ ಹೆಚ್ಚಳ

ರಂಗನತಿಟ್ಟು ಪಕ್ಷಿಧಾಮ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 14:24 IST
Last Updated 14 ಆಗಸ್ಟ್ 2025, 14:24 IST
<div class="paragraphs"><p>ರಂಗನತಿಟ್ಟು ಪಕ್ಷಿಧಾಮ</p></div>

ರಂಗನತಿಟ್ಟು ಪಕ್ಷಿಧಾಮ

   

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದ ಪ್ರವೇಶ ಶುಲ್ಕ ಮತ್ತು ದೋಣಿ ವಿಹಾರ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.

ಭಾರತೀಯರಿಗೆ ₹ 75 ಇದ್ದ ಪ್ರವೇಶ ಶುಲ್ಕ ₹80ಕ್ಕೆ, ವಿದ್ಯಾರ್ಥಿಗಳು ಮತ್ತು ಮಕ್ಕಳಿಗೆ ಇದ್ದ ಶುಲ್ಕ ₹25ರಿಂದ ₹40ಕ್ಕೆ ಏರಿಕೆಯಾಗಿದೆ. ವಿದೇಶಿಗರಿಗೆ ನಿಗದಿ ಮಾಡಿದ್ದ ಪ್ರವೇಶ ಶುಲ್ಕ ₹500ರಿಂದ ₹600ಕ್ಕೆ ಹೆಚ್ಚಳವಾಗಿದೆ. ವಿದೇಶಿ ಮಕ್ಕಳು ಹಾಗೂ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ₹250ರಿಂದ ₹300ಕ್ಕೆ ಏರಿಕೆಯಾಗಿದೆ.

ADVERTISEMENT

ಭಾರತೀಯರಿಗೆ ಇದ್ದ ದೋಣಿ ವಿಹಾರದ ಶುಲ್ಕ ತಲಾ ₹100ರಿಂದ ₹130ಕ್ಕೆ, ವಿದೇಶಿಯರಿಗೆ ಇದ್ದ ಶುಲ್ಕ ₹500ರಿಂದ ₹600ಕ್ಕೆ ಏರಿಕೆಯಾಗಿದೆ. ವಿಶೇಷ ದೋಣಿ ಬಳಸುವ ಭಾರತೀಯರ ಶುಲ್ಕ ₹2000ದಿಂದ ₹2500 ಹಾಗೂ ವಿದೇಶಿಯರ ಶುಲ್ಕ ₹3500ರಿಂದ ₹4000ಕ್ಕೆ ಹೆಚ್ಚಿಸಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಆದೇಶ ಹೊರಡಿಸಿದೆ.

ಪಕ್ಷಿಧಾಮಕ್ಕೆ ಬರುವ ವಾಹನಗಳ ಪಾರ್ಕಿಂಗ್‌ ಶುಲ್ಕ ಕೂಡ ಹೆಚ್ಚಾಗಿದೆ. ಬೈಕ್‌ ನಿಲುಗಡೆ ಶುಲ್ಕ ₹15ರಿಂದ ₹20ಕ್ಕೆ, ಕಾರು ಮತ್ತು ಜೀಪ್‌ ನಿಲುಗಡೆ ಶುಲ್ಕ ₹60ರಿಂದ ₹70ಕ್ಕೆ ಹೆಚ್ಚಳವಾಗಿದೆ.

‘2021–22ರಿಂದ ದರ ರಂಗನತಿಟ್ಟು ಪಕ್ಷಿಧಾಮದ ಪ್ರವೇಶ, ದೋಣಿ ವಿಹಾರ ಮತ್ತು ವಾಹನ ಪಾರ್ಕಿಂಗ್‌ ಶುಲ್ಕದ ಪರಿಷ್ಕರಣೆ ಆಗಿರಲಿಲ್ಲ. ಪ್ರತಿ ಐದು ವರ್ಷಗಳಿಗೊಮ್ಮೆ ಶುಲ್ಕ ಹೆಚ್ಚಿಸುವುದು ವಾಡಿಕೆ. ಆ.1ರಂದು ಶುಲ್ಕ ಪರಿಷ್ಕರಣೆಯ ಆದೇಶ ಬಂದಿದ್ದು, ಆ.8ರಿಂದ ಹೊಸ ದರ ಪಡೆಯಲಾಗುತ್ತಿದೆ’ ಎಂದು ಪಕ್ಷಿಧಾಮದ ವಲಯ ಅರಣ್ಯಾಧಿಕಾರಿ (ವನ್ಯಜೀವಿ ವಿಭಾಗ) ಸಯ್ಯದ್‌ ನದೀಂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.