ADVERTISEMENT

ಸಕಾಲಕ್ಕೆ ತೆರೆಯದ ಸರ್ಕಾರಿ ಶಾಲೆ: ಶಿಕ್ಷಕರ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 16:21 IST
Last Updated 8 ಏಪ್ರಿಲ್ 2022, 16:21 IST
ಶ್ರೀರಂಗಪಟ್ಟಣ ತಾಲ್ಲೂಕಿನ ಮೊಗರಹಳ್ಳಿ ಮಂಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹೊರಗೆ ಕಾದು ಕುಳಿತಿದ್ದರು
ಶ್ರೀರಂಗಪಟ್ಟಣ ತಾಲ್ಲೂಕಿನ ಮೊಗರಹಳ್ಳಿ ಮಂಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹೊರಗೆ ಕಾದು ಕುಳಿತಿದ್ದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಮೊಗರಹಳ್ಳಿ ಮಂಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶುಕ್ರವಾರ ಸಕಾಲಕ್ಕೆ ತೆರೆಯದ ಕಾರಣ ವಿದ್ಯಾರ್ಥಿ ಗಳು ಹೊರಗೆ ಕಾದು ಕುಳಿತಿದ್ದರು.

ಬೆಳಿಗ್ಗೆ 10.15 ಆದರೂ ಶಿಕ್ಷಕರು ಬಂದಿರಲಿಲ್ಲ. ಇದರಿಂದಾಗಿ ಸುಮಾರು ಒಂದು ಗಂಟೆ ವಿದ್ಯಾರ್ಥಿಗಳು ಹೊರಗೇ ಇದ್ದರು. ಇದನ್ನು ನೋಡಿದ ಪೋಷಕರು, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಶಿಕ್ಷಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಶಾಲೆಗೆ ಶಿಕ್ಷಕರು ಸರಿಯಾಗಿ ಬರುತ್ತಿಲ್ಲ. ವಾರದಲ್ಲಿ ಮೂರು ದಿನ ಹೀಗೇ ಆಗುತ್ತಿದೆ. ಕೇಳಿದರೆ ದೂರದಿಂದ ಬರಬೇಕು ಎಂದು ಸಬೂಬು ಹೇಳುತ್ತಾರೆ. ನಿಮಗೆ ಬೇಡವಾದರೆ ವರ್ಗಾವಣೆ ಮಾಡಿಸಿ ಎನ್ನುತ್ತಾರೆ. ಇಂಥ ಶಿಕ್ಷಕರು ನಮ್ಮ ಶಾಲೆಗೆ ಬೇಡ. ವಿಳಂಬವಾಗಿ ಬರುವ, ಪೋಷಕರು, ಸ್ಥಳೀಯ ಜನಪ್ರತಿನಿಧಿಗಳ ಜತೆ ಲಘುವಾಗಿ ಮಾತನಾಡುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಳ್ಳಾರಿಗೌಡ ಒತ್ತಾಯಿಸಿದರು.

ADVERTISEMENT

‘ಸಕಾಲಕ್ಕೆ ಶಾಲೆ ತೆರೆಯದ ದೂರಿನ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್‌.ಅನಂತರಾಜು ಮೊಗರಹಳ್ಳಿ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಶಿಕ್ಷಕರಿಗೆ ನೋಟಿಸ್‌ ನೀಡಿದ್ದಾರೆ’ ಎಂದು ಇಲಾಖೆಯ ಶಿಕ್ಷಣ ಸಂಯೋಜಕರೊಬ್ಬರು ತಿಳಿಸಿದರು.

ಮೊಗರಹಳ್ಳಿ ಮಂಟಿ ಗ್ರಾಮದ ಸರ್ಕಾರಿ ಶಾಲೆಯ ಒಳಾವರಣ ಈ ಹಿಂದೆ ಮೇಕೆಗಳನ್ನು ಕಟ್ಟುವ ಕೊಟ್ಟಿಗೆಯಾಗಿತ್ತು. ಆಗಲೂ ಅಧಿಕಾರಿಗಳು ಶಿಕ್ಷಕರಿಗೆ ನೋಟಿಸ್‌ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.