ADVERTISEMENT

ಬೆಳಕವಾಡಿ | ಥ್ರೋ ಬಾಲ್: ರಾಜ್ಯಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2023, 13:41 IST
Last Updated 13 ಡಿಸೆಂಬರ್ 2023, 13:41 IST
ಬೆಳಕವಾಡಿ ಸಮೀಪದ ಕಿರಗಸೂರು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವರ್ಷ ಮತ್ತು ರೋಹಿಣಿ ಅವರನ್ನು ಅಭಿನಂದಿಸಲಾಯಿತು
ಬೆಳಕವಾಡಿ ಸಮೀಪದ ಕಿರಗಸೂರು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವರ್ಷ ಮತ್ತು ರೋಹಿಣಿ ಅವರನ್ನು ಅಭಿನಂದಿಸಲಾಯಿತು   

ಬೆಳಕವಾಡಿ: ಗ್ರಾಮೀಣ ಭಾಗದ ನಮ್ಮ ಕಿರಗಸೂರು ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿನಿಯರು ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಶಾಲೆಯ ಮುಖ್ಯಶಿಕ್ಷಕ ಶಿವಾನಂದ ತಿಳಿಸಿದರು.

ಗ್ರಾಮದ ಕಿರಗಸೂರು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಥ್ರೋ ಬಾಲ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ರೋಹಿಣಿ ಮತ್ತು ವರ್ಷ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

‘ನಮ್ಮ ಶಾಲೆಯಲ್ಲಿ 1 ರಿಂದ 7ರ ತನಕ ಓದಿದ ಕಿರಗಸೂರು ಗ್ರಾಮದ ವಿದ್ಯಾರ್ಥಿನಿಯರು ಬಾಲ್ಯದಿಂದಲೂ ಕ್ರೀಡೆಯಲ್ಲಿ ಉತ್ತಮ ಆಸಕ್ತಿ ಹೊಂದಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಸ್ಪೂರ್ತಿಯಾಗಬೇಕು. ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಸಾಧನೆ ಮಾಡಿ ಶಾಲೆಗೆ ಮತ್ತು ಗ್ರಾಮಕ್ಕೆ ಗೌರವ ತರಲಿ’ ಎಂದು ಆಶಿಸಿದರು

ADVERTISEMENT

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅರುಣ್ ಕುಮಾರ್,ಉಪಾಧ್ಯಕ್ಷೆ ಪದ್ಮ, ಸದಸ್ಯ ಶಿವಕುಮಾರ, ಕಾರ್ಯದರ್ಶಿ ಪುಟ್ಟ, ಮುಖ್ಯಶಿಕ್ಷಕ ಮಹೇಶ್, ಸುಮತಿ, ರೇಖಾ, ಹರಿಪ್ರಿಯ, ಪ್ರಿಯ ದರ್ಶಿನಿ, ಮಂಜುಳ, ಸಂಗೀತ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.