ADVERTISEMENT

ಆರಾಧನಾ ಇನೋವೇಟಿವ್‌ ಕಾಲೇಜಿಗೆ ‘ಸಮಗ್ರ’ ಪ್ರಶಸ್ತಿ

ಜಿಲ್ಲಾಮಟ್ಟದ ಸಾಂಸ್ಕೃತಿಕ, ಪಠ್ಯೇತರ ಚಟುವಟಿಕೆಗಳ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:06 IST
Last Updated 21 ನವೆಂಬರ್ 2025, 6:06 IST
ಮೈಸೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯು ಆಯೋಜಿಸಿದ್ದ ಮೈಸೂರು ಜಿಲ್ಲಾಮಟ್ಟದ ಸಾಂಸ್ಕೃತಿಕ, ಪಠ್ಯೇತರ ಚಟುವಟಿಕೆ ಸ್ಪರ್ಧೆಗಳ ಕಾರ್ಯಕ್ರಮವನ್ನು ಎಂ.ಸಿ.ನಾಗಮ್ಮ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯು ಆಯೋಜಿಸಿದ್ದ ಮೈಸೂರು ಜಿಲ್ಲಾಮಟ್ಟದ ಸಾಂಸ್ಕೃತಿಕ, ಪಠ್ಯೇತರ ಚಟುವಟಿಕೆ ಸ್ಪರ್ಧೆಗಳ ಕಾರ್ಯಕ್ರಮವನ್ನು ಎಂ.ಸಿ.ನಾಗಮ್ಮ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ   

ಮೈಸೂರು: ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ)ಯು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ, ಪಠ್ಯೇತರ ಚಟುವಟಿಕೆ ಸ್ಪರ್ಧೆಯಲ್ಲಿ ಹುಣಸೂರಿನ ಆರಾಧನಾ ಇನೋವೇಟಿವ್‌ ಕಾಲೇಜು ಸಮಗ್ರ ಪ್ರಶಸ್ತಿ ಪಡೆಯಿತು.

ವಿಜೇತರ ವಿವರ: ಪ್ರಥಮ ಪಿಯುಸಿ ವಿಭಾಗ: ಕನ್ನಡ ಚರ್ಚಾ ಸ್ಪರ್ಧೆ– ಅಮೋಘ.ಟಿ.ಎಚ್‌ (ಮೈಸೂರು ಜ್ಞಾನೋದಯ), ಚಂದನ್‌ ಎಚ್‌.ಪಿ (ತಿ.ನರಸೀಪುರ ಸ.ಪ.ಪೂ.ಕಾ), ಶ್ರಾವ್ಯ (ಬೆಟ್ಟದಪುರ ಅನಿಕೇತನ). ಇಂಗ್ಲೀಷ್‌ ಚರ್ಚಾ ಸ್ಪರ್ಧೆ– ಸಾನ್ವಿ ರಾವ್‌ (ಸದ್ವಿದ್ಯಾ ಸೆಮಿ ರೆಸಿಡೆನ್ಸಿ), ಶರಣ್ಯ (ಮೈಸೂರು ಜಯಚಾಮರಾಜೇಂದ್ರ), ಶ್ರೀ ಶಕ್ತಿ (ಹುಣಸೂರು ಶಾಸ್ತ್ರಿ). ಕನ್ನಡ ಪ್ರಬಂಧ ಸ್ಪರ್ಧೆ– ಧೃತಿ.ಬಿ.ಎಸ್‌ (ಸದ್ವಿದ್ಯಾ ಸೆಮಿ ರೆಸಿಡೆನ್ಸಿ), ಸ್ನೇಹ ಪಾಟಿಲ್‌ (ಎಚ್‌.ಡಿ.ಕೋಟೆ ವಿವೇಕಾ), ಮಾನಸ (ನಂಜನಗೂಡು ಬಾಲಕರ ಪ.ಪೂ.ಕಾ).

ಇಂಗ್ಲೀಷ್ ಪ್ರಬಂಧ– ಮಾನ್ಯ.ಜಿ (ಎಚ್‌.ಡಿ.ಕೋಟೆ ವಿವೇಕಾ), ಸಂಪ್ರೀತ್‌ ಹೆಗ್ಡೆ (ರಾಮಕೃಷ್ಣ ವಿದ್ಯಾಲಯ), ಸಂಜನ ವೈಷ್ಣವಿ (ಮೈಸೂರು ಸತ್ಯಸಾಯಿಬಾಬ). ಭಾವಗೀತೆ– ರಜತ್‌ (ಸದ್ವಿದ್ಯಾ ಸೆಮಿರೆಸಿಡೆನ್ಸಿ), ತನಿಷ್ಕಾ.ಆರ್‌ (ಹುಣಸೂರು ಆರಾಧನಾ ಪ.ಪೂ.ಕಾ), ಐಶ್ವರ್ಯ.ಆರ್‌ (ಪಿರಿಯಾಪಟ್ಟಣ ನಳಂದಾ ಇಂಟರ್‌ನ್ಯಾಷನಲ್‌). ಜನಪದ ಗೀತೆ– ತನ್ಮಯ.ಜಿ (ಆರಾಧನಾ ಇನೋವೇಟಿವ್), ಮಧು ಶ್ರೀ (ತಿ.ನರಸೀಪುರ ಸ.ಪ.ಪೂ.ಕಾ), ವೇಣುಗೋಪಾಲ್‌ ಕೋತ್ವಾಲ್‌ (ಮೈಸೂರು ಆರ್‌ಕೆವಿಕೆ). 

ADVERTISEMENT

ಏಕಪಾತ್ರಾಭಿನಯ– ಜೀವಿತಾ (ಆರಾಧನಾ ಇನೋವೇಟಿವ್‌), ಸೃಜನಾಧಿತ್ಯ ಶೀಲ (ಕುವೆಂಪುನಗರ ಪ.ಪೂ.ಕಾ), ಸೋಮು.ಬಿ.ಕೆ (ಪಿರಿಯಾಪಟ್ಟಣ ನಳಂದಾ). ರಸಪ್ರಶ್ನೆ– ಜೀವನ್‌.ಜಿ, ಕಾರ್ತಿಕ್‌.ಆರ್‌ (ಸದ್ವಿದ್ಯಾ ಸಂಯುಕ್ತಾ ಪ.ಪೂ.ಕಾ), ಯೋಗಾನಂದ.ಟಿ.ಎಸ್‌, ಭುವನ್‌.ಜಿ (ಎಂಎಎಸ್‌ವಿಎಸ್‌), ಚಿರಂಜೀವಿ, ಪುನೀತ್‌ (ಬನ್ನೂರು ತಿ.ನರಸೀಪುರ ಸ.ಪ.ಪೂ.ಕಾ). ಚಿತ್ರಕಲೆ– ನಿತಿನ್‌.ಕೆ.ಪಿ (ಹುಣಸೂರು ಕ್ರೈಸ್ಟ್‌ ರಿವರ್ ವ್ಯೂ), ಸಾಹಿತ್ಯ (ಎಚ್‌.ಡಿ.ಕೋಟೆ ವಿದ್ಯಾಸಿಂಚನಾ), ತರುಣ್‌ ಗಣೇಶ್‌.ಟಿ (ಮೈಸೂರು ಸ.ಪ.ಪೂ.ಕಾ). ಜಾನಪದ ನೃತ್ಯ– ಯಶ್ವಂತ್‌ (ಪಿರಿಯಾಪಟ್ಟಣ ಅನಿಕೇತನ), ವೈಷ್ಣವಿ.ಎಚ್‌.ಎನ್‌ ಮತ್ತು ತಂಡ (ನಂಜನಗೂರು ಕಾರ್ಮೆಲ್‌), ಕವನ ಮತ್ತು ತಂಡ (ಕೆ.ಆರ್‌ ನಗರ ಆದರ್ಶ ಸ.ಪ.ಪೂ.ಕಾ). ವಿಜ್ಞಾನ ಮಾದರಿ ತಯಾರಿಕೆ– ಇಶಾಂತ್‌.ಪಿ (ಕುವೆಂಪುನಗರ ಸ.ಪ.ಪೂ.ಕಾ), ನಮಿತ್‌.ಸಿ (ನಂಜನಗೂಡು ಕಾರ್ಮೆಲ್‌), ಎಸ್‌.ಶ್ರೇಯಸ್‌ ಪ್ರಣವ್‌ (ಮೈಸೂರು ಜ್ಞಾನೋದಯ) ಕ್ರಮವಾಗಿ ಪ್ರಥಮ, ದ್ವಿತೀಯ ತೃತೀಯ ಸ್ಥಾನ ಪಡೆದರು.

ದ್ವಿತೀಯ ಪಿಯುಸಿ ವಿಭಾಗ: ಕನ್ನಡ ಚರ್ಚಾ ಸ್ಪರ್ಧೆ– ನಾಗರತ್ನ (ಎಚ್‌.ಡಿ.ಕೋಟೆ ವಿವೇಕಾ), ಭುವನ (ಹುಣಸೂರು ಸೇಂಟ್‌ ಜೋಸೆಫ್‌), ಅಂಕಿತಾ (ತಿ.ನರಸೀಪುರ ಸ.ಪ.ಪೂ.ಕಾ). ಇಂಗ್ಲೀಷ್‌ ಚರ್ಚಾ ಸ್ಪರ್ಧೆ– ವೈ.ಪ್ರಧ್ಯುಮ್ನ ಭಟ್‌ (ಜ್ಞಾನೋದಯ), ದೀಪ ಶ್ರೀ.ಕೆ (ಸಂತೆಮಾಳ ಸ.ಪ.ಪೂ.ಕಾ), ಸ್ನೇಹಿತ್‌ (ಸರಗೂರು ವಿವೇಕಾನಂದ). ಕನ್ನಡ ಪ್ರಬಂಧ ಸ್ಪರ್ಧೆ– ಗುಣ ಶ್ರೀ (ಮೈಸೂರು ವಿವೇಕಾನಂದ), ಸಂಗೀತಾ ಎನ್‌.ಎಸ್‌ (ರಾವಂದೂರು ಸ.ಪ.ಪೂ.ಕಾ), ವರ್ಷ.ಎ.ಆರ್‌ (ಬೆಟ್ಟದಪುರ ಡಿ.ಟಿ.ಎಂ.ಎನ್‌).

ಇಂಗ್ಲೀಷ್ ಪ್ರಬಂಧ– ದೀಕ್ಷಾ ಎಸ್‌.ಗೌಡ (ಹುಣಸೂರು ಆರಾಧನಾ ಇನೋವೇಟಿವ್‌), ಸುರಭಿ.ಎಚ್‌ (ಮೈಸೂರು ಜ್ಞಾನೋದಯ), ಚೇತನ.ಕೆ (ಮೈಸೂರು ಶೇಷಾದ್ರಿಪುರಂ). ಭಾವಗೀತೆ– ಕೆ.ಕೆ.ವೈಭವಿ (ಮೈಸೂರು ಜ್ಞಾನೋದಯ), ಅಪ್ರಮೇಯ.ಎ.ಆರ್ (ಸದ್ವಿದ್ಯಾ ಸಂಯುಕ್ತ ಪ.ಪೂ.ಕಾ), ಮೌಲ್ಯ.ಎಂ (ಹುಣಸೂರು ಆರಾಧನಾ ಇನೋವೇಟಿವ್‌). ಜನಪದ ಗೀತೆ– ಹರ್ಷಿತಾ.ಎಚ್‌.ಆರ್‌ (ರಾವಂದೂರು ಸ.ಪ.ಪೂ.ಕಾ), ಸೃಜನ.ಕೆ.ವಿ (ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್‌), ಸಿರಿಗೌಡ (ಹುಣಸೂರು ಆರಾಧನಾ ಇನೋವೇಟಿವ್‌). 

ಏಕಪಾತ್ರಾಭಿನಯ– ಗಿರೀಶ್‌.ಎಂ.ಪಿ (ಮೈಸೂರು ಸತ್ಯಸಾಯಿಬಾಬಾ), ಭೂಮಿಕಾ.ಎಂ (ಆರಾಧನಾ ಇನೋವೇಟಿವ್‌), ನಾಗರತ್ನ (ಎಚ್‌.ಡಿ.ಕೋಟೆ ವಿವೇಕಾ). ರಸಪ್ರಶ್ನೆ– ವಿಶೃತ್‌.ಎಸ್‌.ಪ್ರಸಾದ್‌, ಅದೈತ್‌.ಕೆ.ವಿ (ಮೈಸೂರು ವಿಜಯ ವಿಠಲ), ಶ್ರೀಧಾ ಭಟ್‌, ನಿಶಾಂತ್‌.ಎಸ್‌ (ಮೈಸೂರು ಜ್ಞಾನೋದಯ), ಹರೀಶ್‌, ವೀರೇಶ್‌ (ತಿ.ನರಸೀಪುರ ಸೇಂಟ್‌ ನಾರ್ಬರ್ಟ್‌). ಚಿತ್ರಕಲೆ– ಕಿಶನ್‌.ಬಿ.ಸಿ (ಶೇಷಾದ್ರಿಪುರಂ), ಸಾನ್ವಿ.ಕೆ (ಮೈಸೂರು ರಾಮಕೃಷ್ಣ ವಿದ್ಯಾಕೇಂದ್ರ), ರಾಹುಲ್‌.ಎಸ್‌.ಕೆ (ಹುಣಸೂರು ಕ್ರೈಸ್ಟ್‌ ರಿವರ್‌ ವ್ಯೂ). ಜಾನಪದ ನೃತ್ಯ– ಸೌಗಂಧಿಕಾ ಮತ್ತು ತಂಡ (ಮೈಸೂರು ಎಂಎಂಕೆ ಮತ್ತು ಎಸ್‌ಡಿಎಂ), ಉಜ್ವಲ ಮತ್ತು ತಂಡ (ಮಂಜೇಗೌಡನಕೊಪ್ಪಲು  ಸ.ಪ.ಪೂ.ಕಾ), ಸೌಜನ್ಯ ಮತ್ತು ತಂಡ (ತಿ.ನರಸೀಪುರ ವಿದ್ಯೋದಯ). ವಿಜ್ಞಾನ ಮಾದರಿ ತಯಾರಿಕೆ– ಫೆಬಿನ್‌.ಪ.ಥಾಮಸ್‌ (ಹುಣಸೂರು ಸೇಂಟ್‌ ಜೋಸೆಫ್‌), ಸಂಧ್ಯಾ.ಎನ್‌ (ನಂಜನಗೂಡು ಸ.ಬಾ.ಪ.ಪೂ.ಕಾ), ಗಣೇಶ್‌.ಆರ್‌ (ನಂಜನಗೂಡು ಕಾರ್ಮೆಲ್‌) ಕ್ರಮವಾಗಿ ಪ್ರಥಮ, ದ್ವಿತೀಯ ತೃತೀಯ ಸ್ಥಾನ ಪಡೆದರು.

‘ಭವಿಷ್ಯದ ಸವಾಲಿಗೆ ಸ್ಪರ್ಧೆ ಪ್ರೇರಣೆ’ ಜಿಲ್ಲಾಮಟ್ಟದ ಸ್ಪರ್ಧೆಯನ್ನು ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಅಧ್ಯಕ್ಷ ಜೆ.ಶಶಿಧರ ಪ್ರಸಾದ್‌ ಉದ್ಘಾಟಿಸಿದರು. ಬಳಿಕ ಮಾತನಾಡಿ ‘ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಸ್ಪರ್ಧಾ ಮನೋಭಾವ ಬೆಳೆಯುತ್ತದೆ. ನಮಗರಿವಿಲ್ಲದಂತೆ ಭವಿಷ್ಯದ ಸವಾಲುಗಳಿಗೆ ಸಿದ್ದರಾಗುತ್ತೇವೆ. ವಿವೇಕಾನಂದ ಕಾಲೇಜು ಸಂತಕವಿ ಕುವೆಂಪು ಓಡಾಡಿದ ಪುಣ್ಯನೆಲ. ಇಲ್ಲಿ ಬಹುಮಾನಕ್ಕಿಂತ ಭಾಗವಹಿಸುವಿಕೆ ಮುಖ್ಯ’ ಎಂದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಪಿ.ನಾಗಮ್ಮ ಮಾತನಾಡಿ ‘ಶಿಕ್ಷಕ ವಿದ್ಯಾರ್ಥಿಗೆ ಶಿಕ್ಷಣದ ಮೂಟೆ ಹೊರಿಸಿದರೆ ಸಾಲದು ಸಾಂಸ್ಕೃತಿಕ ಕ್ರೀಡಾ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಇದರಿಂದ ಮಕ್ಕಳ ಪ್ರತಿಭೆ ಅನಾವರಣಗೊಳ್ಳುತ್ತದೆ’ ಎಂದು ತಿಳಿಸಿದರು. ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನ ಧರ್ಮದರ್ಶಿ ಜಿ.ರಮೇಶ್‌ ಕಾರ್ಯದರ್ಶಿ ಶಿವಸುಂದರ ಸತ್ಯೇಂದ್ರ ಕಾಲೇಜಿನ ಪ್ರಾಂಶುಪಾಲ ಎಂ.ವೆಂಕಟೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.