ADVERTISEMENT

ಮೈಸೂರು: ಮಾಸ್ಕ್ ಧರಿಸದೇ ಓಡಾಟ, ಪಾಲಿಕೆಯಿಂದ ₹16,700 ದಂಡ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 1 ಮೇ 2020, 7:40 IST
Last Updated 1 ಮೇ 2020, 7:40 IST
ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಗೆ ದಂಡ ವಿಧಿಸಲಾಯಿತು
ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಗೆ ದಂಡ ವಿಧಿಸಲಾಯಿತು   

ಮೈಸೂರು: ನಗರದಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಂದ ಪಾಲಿಕೆ ಅಧಿಕಾರಿಗಳ ತಂಡವು ಶುಕ್ರವಾರ ಮಧ್ಯಾಹ್ನದವರೆಗೆ ₹ 16,700 ದಂಡ ಸಂಗ್ರಹಿಸಿದೆ.

ಪಾಲಿಕೆಯ ವಲಯ 1- ₹ 300, ವಲಯ 2- ₹ 4,600, ವಲಯ- 3 ₹ 400, ವಲಯ - 4 ₹ 5,500, ವಲಯ 6 ₹800 , ವಲಯ 7- ₹2,600, ವಲಯ -8 ₹1,000, ವಲಯ 9 ₹500 ದಂಡ ಸಂಗ್ರಹ ಮಾಡಲಾಗಿದೆ.

ಪಾಲಿಕೆಯ 18 ಮಂದಿ ಅಧಿಕಾರಿಗಳು, ಪೊಲೀಸ್‌ ಇಲಾಖೆಯಿಂದ 18 ಮಂದಿ, ಪಾಲಿಕೆಯ 30 ಮಂದಿ ಆರೋಗ್ಯ ನಿರೀಕ್ಷಕರು, 18 ಮಂದಿ ಪರಿಸರ ಎಂಜಿನಿಯರ್‌ ತಂಡದಲ್ಲಿದ್ದು, ಮಾಸ್ಕ್ ಧರಿಸದೇ ಇರುವವರಿಗೆ ದಂಡ ವಸೂಲಿ ಮಾಡಿ ರಶೀದಿ ಕೊಡಲಾಗುತ್ತಿದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.