ADVERTISEMENT

ನಗರದಲ್ಲಿ ಹೆಚ್ಚಿದ ಪುಂಡಾಟಿಕೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 1:51 IST
Last Updated 8 ಸೆಪ್ಟೆಂಬರ್ 2020, 1:51 IST

ಮೈಸೂರು: ನಗರದಲ್ಲಿ ದಿನದಿಂದ ದಿನಕ್ಕೆ ಪುಂಡಾಟಿಕೆ ಹೆಚ್ಚುತ್ತಿದೆ. ಸರಗಳ್ಳತನ ಮತ್ತು ಸುಲಿಗೆ ಪ್ರಕರಣಗಳು ಕಳೆದ ಎರಡು ದಿನಗಳಿಂದಿಚೇಗೆ ಹೆಚ್ಚಾಗಿದ್ದು, ಆತಂಕ ಮೂಡಿಸಿದೆ.

ಚಾಮುಂಡಿಬೆಟ್ಟಕ್ಕೆ ಹೋಗಿ ವಾಪ‍ಸ್ ಬರುವಾಗ ವ್ಯಕ್ತಿಯೊಬ್ಬರಿಂದ ಸೋಮವಾರ ಸಂಜೆ 7.30ರ ಸಮಯದಲ್ಲಿ ನಾಲ್ವರು ಅಡ್ಡಗಟ್ಟಿ, ಬೈಕ್‌ನ್ನು ಕಿತ್ತುಕೊಂಡು ಹೋಗಿದ್ದಾರೆ. ರಾತ್ರಿ 8 ಗಂಟೆಯ ಸಮಯದಲ್ಲಿ ವಿದ್ಯಾರಣ್ಯಾಪುರಂನಲ್ಲಿ ಗೌರಮ್ಮ (60) ಎಂಬುವವರನ್ನು ತಡೆದ ಕಳ್ಳರು, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಇಲ್ಲಿನ ಕ್ರಾಫರ್ಡ್‌ ಸಭಾಂಗಣದ ಸಮೀಪದ ಕೌಟಿಲ್ಯ ವೃತ್ತದ ಬಳಿ ಮಹದೇವಸ್ವಾಮಿ ಎಂಬುವವರನ್ನು ತಡೆದ ಪುಂಡರು ಮೊಬೈಲ್ ಹಾಗೂ ₹ 7,400 ಹಣವನ್ನು ಕಿತ್ತುಕೊಂಡು ಹೋಗಿದ್ದಾರೆ.

ADVERTISEMENT

ಭಾನುವಾರ ರಾತ್ರಿ ಚಂದ್ರು ಎಂಬುವವರು ಜೆ.ಪಿ.ನಗರ ಸಮೀಪದ ರಿಂಗ್‌ರಸ್ತೆಯ ಸರ್ವೀಸ್‌ ರಸ್ತೆಯಲ್ಲಿ ವಾಯುವಿಹಾರ ನಡೆಸುವಾಗ ಮೂವರು ಕಳ್ಳರು ಕುತ್ತಿಗೆಯಲ್ಲಿದ್ದ 15 ಗ್ರಾಂ ಸರವನ್ನು ಕಿತ್ತುಕೊಂಡು ಆಟೊದಲ್ಲಿ ಹೊರಟು ಹೋಗಿದ್ದಾರೆ. ಪಾಲಿಕೆ ಹಿಂಭಾಗದ ರಸ್ತೆಯಲ್ಲಿ ಕಾರಿನಲ್ಲಿ ಬರುತ್ತಿದ್ದ ಅನಿಲ್‌ ಎಂಬುವವರನ್ನು ತಡೆದ ಪುಂಡರ ಗುಂಪೊಂದು ಹಲ್ಲೆ ನಡೆಸಿ ಪರಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.