ಎಂ.ಎಸ್. ಮಂಜುನಾಥ್, ರಂಜು ಪಿ., ಫಕ್ರುದ್ದೀನ್ ಎಚ್.
ಮೈಸೂರು: ‘ಮೈಸೂರು ದಸರಾ’ ನಿಮಿತ್ತ ‘ಮೈಸೂರು ಪತ್ರಿಕಾ ಛಾಯಾಗ್ರಾಹಕರ ಸಂಘ’ವು ನಡೆಸಿದ ರಾಜ್ಯಮಟ್ಟದ ಸುದ್ದಿ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ಪ್ರಜಾವಾಣಿ’ಯ ಮೂವರು ಪತ್ರಿಕಾ ಛಾಯಾಗ್ರಾಹಕರು ಸೇರಿದಂತೆ 7 ಮಂದಿ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಬಿ.ಸತೀಶ್ ಪ್ರಥಮ ಸ್ಥಾನ ಪಡೆದರು. ದ್ವಿತೀಯ, ತೃತೀಯ ಬಹುಮಾನಕ್ಕೆ ಕ್ರಮವಾಗಿ ‘ಪ್ರಜಾವಾಣಿ’ಯ ಛಾಯಾಗ್ರಾಹಕರಾದ ಎಂ.ಎಸ್.ಮಂಜುನಾಥ್ ಮತ್ತು ಪಿ.ರಂಜು ಭಾಜನರಾಗಿದ್ದಾರೆ. ಬಹುಮಾನವು ಕ್ರಮವಾಗಿ ₹ 25 ಸಾವಿರ, ₹15 ಸಾವಿರ ಹಾಗೂ ₹10 ಸಾವಿರ ನಗದು ಒಳಗೊಂಡಿದೆ.
ನೇತ್ರ ರಾಜು ಸ್ಮರಣಾರ್ಥ ಬಹುಮಾನ (₹15ಸಾವಿರ) ವಿಜಯಪುರದ ಸುಧೀಂದ್ರ ಕುಲಕರ್ಣಿ ಅವರಿಗೆ ಸಂದಿದೆ. ಎಸ್.ಚರಣ್, ಬಾಗಲಕೋಟೆಯ ಇಂದ್ರಕುಮಾರ್ ದಸ್ತೇನವರ ಹಾಗೂ ‘ಪ್ರಜಾವಾಣಿ’ಯ ಎಚ್.ಫಕ್ರುದ್ದೀನ್ ಅವರಿಗೆ ಸಮಾಧಾನಕರ ಬಹುಮಾನ (ತಲಾ ₹ 1ಸಾವಿರ) ಲಭಿಸಿದೆ.
ದಸರಾ ನಂತರ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುಮಾನ ವಿತರಿಸುವರು ಎಂದು ಸಂಘದ ಅಧ್ಯಕ್ಷ ಪ್ರಗತಿ ಗೋಪಾಲಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.