ADVERTISEMENT

ಜಾನಪದ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ನಂಜಯ್ಯ ಹೊಂಗನೂರು

ಅಮ್ಮ ವಸುಂಧರೆ ಜಾನಪದ ಕಲೋತ್ಸವ, ಸನ್ಮಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 4:05 IST
Last Updated 28 ಡಿಸೆಂಬರ್ 2025, 4:05 IST
ಮೈಸೂರು ತಾಲ್ಲೂಕು ಜಯಪುರ ಹೋಬಳಿಯ ಉದ್ಬೂರು ಗೇಟ್ ಬಳಿಯ ವಿಷ್ಣುವರ್ಧನ್ ಸ್ಮಾರಕ ಸಭಾಂಗಣದಲ್ಲಿ, ಅಮ್ಮ ವಸುಂಧರೆ ಸಾಮಾಜಿಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ವತಿಯಿಂದ ಶನಿವಾರ ನಡೆದ ಜಾನಪದ ಕಲೋತ್ಸವ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಪಿ. ಶಿವರಾಜು ರವರು ನಗರಿ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೈಸೂರು ತಾಲ್ಲೂಕು ಜಯಪುರ ಹೋಬಳಿಯ ಉದ್ಬೂರು ಗೇಟ್ ಬಳಿಯ ವಿಷ್ಣುವರ್ಧನ್ ಸ್ಮಾರಕ ಸಭಾಂಗಣದಲ್ಲಿ, ಅಮ್ಮ ವಸುಂಧರೆ ಸಾಮಾಜಿಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ವತಿಯಿಂದ ಶನಿವಾರ ನಡೆದ ಜಾನಪದ ಕಲೋತ್ಸವ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಪಿ. ಶಿವರಾಜು ರವರು ನಗರಿ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.   

ಜಯಪುರ: ‘ಜಾನಪದಕ್ಕೆ ಸಾವಿಲ್ಲ. ಕಲಾವಿದರು ಮುಂದಿನ ತಲೆಮಾರಿಗೂ ಜನಪದ ಕಲೆ ಕೊಂಡೊಯ್ಯುವ ಕೆಲಸ ಮಾಡಬೇಕು’ ಎಂದು ಮೈಸೂರು ವಿ.ವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜನಪದ ವಿಭಾಗ ಮುಖ್ಯಸ್ಥ ನಂಜಯ್ಯ ಹೊಂಗನೂರು ಹೇಳಿದರು.

ಮೈಸೂರು ತಾಲ್ಲೂಕು ಜಯಪುರ ಹೋಬಳಿ ಉದ್ಬೂರು ಗೇಟ್ ಬಳಿಯ ವಿಷ್ಣುವರ್ಧನ್ ಸ್ಮಾರಕ ಸಭಾಂಗಣದಲ್ಲಿ ಅಮ್ಮ ವಸುಂಧರೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶನಿವಾರ ನಡೆದ ಅಮ್ಮ ವಸುಂಧರೆ ಜಾನಪದ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾನಪದ ಕಲಾವಿದರಿಗೆ ರಾಜ್ಯ, ಕೇಂದ್ರ ಸರ್ಕಾರ ಅತ್ಯುನ್ನತ ಪ್ರಶಸ್ತಿ ನೀಡಬೇಕು. ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ನೀಡುವ ಮೂಲಕ ಜಾನಪದ ಸಾಹಿತ್ಯ ಶ್ರೀಮಂತಗೊಳಿಸಬಹುದು ಎಂದರು.

ADVERTISEMENT

ಅಮ್ಮ ರಾಮಚಂದ್ರ ಜಾನಪದ ರಾಯಭಾರಿ ಯಾಗಿದ್ದಾರೆ. ಅಮ್ಮ ವಸುಂಧರೆ ಸಾಮಾಜಿಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಜಾನಪದವನ್ನು ಎಲ್ಲರಿಗೂ ಕಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಬೆಂಗಳೂರು ಅಬಕಾರಿ ಇಲಾಖೆ ಉಪ ಆಯುಕ್ತರಾದ ಕೆ.ಎಂ.ಸುರೇಶ್ ಮಾತನಾಡಿದರು. ಅಮ್ಮ ವಸುಂಧರೆ ಸಾಮಾಜಿಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ಅಧ್ಯಕ್ಷ ಪುಟ್ಟರಾಜು, ದೇವಮ್ಮ ಗೋಪಾಲ್, ಸಾಹಿತಿ ಸುರೇಶ್ ಗೌತಮ್, ಸೋಮಣ್ಣ, ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಸುದರ್ಶನ್, ಆಹಾರ ನಾಗರಿಕ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಇದ್ದರು.

ಸಮಾರಂಭದಲ್ಲಿ ವಿವಿಧ ಜಾನಪದ ಕಲೆ ಸೇರಿದಂತೆ ಸಂಗೀತ ಕಾರ್ಯಕ್ರಮ ನಡೆಯಿತು.

ಪ್ರಶಸ್ತಿ ಪುರಸ್ಕೃತರು

ಕೊಳ್ಳೇಗಾಲ ತಾಲ್ಲೂಕಿನ ಕಲಾವಿದ ಶಿವಕುಮಾರ್ ಸಮಾಜ ಸೇವಕ ಅಹಿಂದ ಜವರಪ್ಪ ಮೈಸೂರು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಎಚ್.ಪ್ರಕಾಶ್ ಎಂ.ಪ್ರದೀಪ್ ಕುಮಾರ್ ಅವರಿಗೆ (ಅಮ್ಮ ವಸುಂಧರೆ ಕಲಾಪೋಷಕ) ಪ್ರಶಸ್ತಿ ಮೈಸೂರು ಆರ್.ಕೃಷ್ಣಮೂರ್ತಿ ಅವರಿಗೆ (ದ್ವಿಕಂಠ ಗಾನರತ್ನ) ಪ್ರಶಸ್ತಿ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಅವರಿಗೆ (ಸಾಹಿತ್ಯ ರತ್ನ) ಪ್ರಶಸ್ತಿ ಮುಕೇಶ್ ಅವರಿಗೆ (ಸೇವರತ್ನ) ಪ್ರಶಸ್ತಿ ಡಿ.ಸಾಲುಂಡಿ ಸ್ಯಾಂಡಲ್ ರೋಸ್ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯದರ್ಶಿ ಶೋಭಾ ಶಿವರಾಜು ಅವರಿಗೆ (ಅಮ್ಮ ವಸುಂಧರೆ ಸೇವಾಭೂಷಣ) ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರ್.ಕೃಷ್ಣಮೂರ್ತಿ ಪನ್ನಗ ವಿಜಯ್ ಕುಮಾರ್ ಮಂಜುಳಾ ಪದ್ಮಶ್ರೀ ಕೊಡಗೇಹಳ್ಳಿ ಸೋಬಾನೆ ಚಿಕ್ಕತಾಯಮ್ಮ ಕಂಸಾಳೆ ಮಹಾದೇವ ಎಚ್.ಮರಿಸ್ವಾಮಿ ಅವರಿಗೆ (ಅಮ್ಮ ವಸುಂಧರೆ ಜಾನಪದ ಗಾಯನ) ಪ್ರಶಸ್ತಿ ಹಾಗೂ ಮೂರ್ತಿ ಎಚ್.ಮುಡಿಗುಂಡ ಜಾಕಿ ಪ್ರತಾಪ್ ಅವರಿಗೆ (ಅಮ್ಮ ವಸುಂಧರೆ ಕಲಾರತ್ನ) ಪ್ರಶಸ್ತಿ ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸ್ ವಿದ್ವಾನ್ ಡಿ.ವಿ.ರವೀಶ್ ಗಾಯಕ ಮಹಾದೇವ ಕಾಳಿರಾಮೇಗೌಡ ಬಿಳಿಗಿರಿ ಆರ್.ಜಯಪುರ ಬಿ.ಬಸವರಾಜು ಅವರಿಗೆ (ಅಮ್ಮ ವಸುಂಧರೆ ಸಾಂಸ್ಕೃತಿಕ ಗೌರವ) ಪ್ರಶಸ್ತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.