ADVERTISEMENT

ಗ್ರೇಟರ್‌ ಮೈಸೂರು: ವಿಚಾರ ಸಂಕಿರಣ ಮಾರ್ಚ್ 6ರಂದು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 3:15 IST
Last Updated 3 ಮಾರ್ಚ್ 2026, 3:15 IST
<div class="paragraphs"><p>ಮೈಸೂರು ಅರಮನೆ</p></div>

ಮೈಸೂರು ಅರಮನೆ

   

ಪ್ರಜಾವಾಣಿ ಚಿತ್ರ: ರಂಜು ಪಿ

ಮೈಸೂರು: ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಸುಸ್ಥಿರತಾ ಕೇಂದ್ರ ಮತ್ತು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (ಎಫ್‌ಐಸಿಸಿಐ) ಸಹಯೋಗದೊಂದಿಗೆ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರಿಂಗ್ ವತಿಯಿಂದ ಮಾರ್ಚ್ 6ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಎನ್‌ಐಇ ವಜ್ರ ಮಹೋತ್ಸವ ಸಭಾಂಗಣದಲ್ಲಿ ‘ಗ್ರೇಟರ್‌ ಮೈಸೂರಿಗೆ ಸುಸ್ಥಿರ ಅಭಿವೃದ್ಧಿ ದೃಷ್ಟಿಕೋನ’ ವಿಷಯ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸಂಚಾಲಕ ಸಂಜಿತ್ ಎಸ್.ಅಂಚನ್ ಹೇಳಿದರು.

ADVERTISEMENT

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ನಟ ಪ್ರಕಾಶ್ ಬೆಳವಾಡಿ, ಶಾಜು ಮಂಗಲಂ, ಆದಿತ್ಯ ಎಂ.ಗೋಕರ್ಣ, ಬಿ.ಎಸ್‌.ನಾಗೇಂದ್ರ ಪರಾಶರ್ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಎಂ.ಎಸ್‌.ರಂಗನಾಥ್ ವಹಿಸುವರು ಎಂದು ತಿಳಿಸಿದರು.

ಭಾಷಣಕಾರರಾಗಿ ಇಸ್ರೋ ಮಾಜಿ ವಿಜ್ಞಾನಿ ಪ್ರೊ.ಪಿ.ಜಿ.ದಿವಾಕರ್, ಚಿನ್ಮಯ್ ಹೆಗ್ಡೆ, ಪ್ರಭಾತ್ ಯಾದವ್, ಪ್ರೊ.ಶ್ಯಾಮ್ ಸುಂದರ್ ಭಾಗವಹಿಸುವರು. ಪ್ಯಾನೆಲಿಸ್ಟ್ ತಜ್ಞರಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶೇಖ್ ತನ್ವೀರ್‌ ಆಸಿಫ್, ರಕ್ಷಿತ್ ಕೆ, ವಿ.ಎನ್.ಪ್ರಸಾದ್, ಮಹೇಶ್, ಕೆ.ಸಿ.ಮಂಜುನಾಥ್ ಪಾಲ್ಗೊಳ್ಳುವರು ಎಂದು ತಿಳಿಸಿದರು.

‘ಸರ್ಕಾರ ಗ್ರೇಟರ್ ಮೈಸೂರು ರಚನೆ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಈ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಇಲ್ಲಿ ಚರ್ಚಿಸಿ ಬಂದ ಫಲಶ್ರುತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ನಟ ಪ್ರಕಾಶ್ ಬೆಳವಾಡಿ ಮಾತನಾಡಿ, ‘ಮೈಸೂರು ಮುಂದಿನ ಪೀಳಿಗೆಗೂ ವಾಸಯೋಗ್ಯವಾಗಿರುವಂತೆ ನೋಡಿಕೊಳ್ಳವ ನಿಟ್ಟಿನಲ್ಲಿ ಹಾಗೂ ಬೆಂಗಳೂರಿನಂತೆ ಸಮಸ್ಯಾತ್ಮಕವಾಗದಂತೆ ಇರುವ ನಿಟ್ಟಿನಲ್ಲಿ ಈ ರೀತಿಯ ವಿಚಾರ ಸಂಕಿರಣಗಳು ಅಗತ್ಯ’ ಎಂದರು.

‘ಮೈಸೂರಿನ ತ್ವರಿತ ವಿಸ್ತರಣೆ, ಮೂಲಸೌಕರ್ಯ ಬೇಡಿಕೆ, ಪರಿಸರ ಸವಾಲು ತಂತ್ರಗಳು, ಸ್ಮಾರ್ಟ್ ಮೊಬಿಲಿಟಿ ಪರಿಹಾರ, ಜಲ ಸಂಪನ್ಮೂಲ ನಿರ್ವಹಣೆ, ಪರಿಸರ ಸಂರಕ್ಷಣೆ ಮೊದಲಾದ ವಿಷಯಗಳಲ್ಲಿ ಬೆಳಕು ಚೆಲ್ಲುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ’ ಎಂದು ತಿಳಿಸಿದರು.

ಡಾ.ಬಾಲಾಜಿ, ಪ್ರೊ.ಸದಾಶಿವಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.