ADVERTISEMENT

ಮೈಸೂರಿನಲ್ಲಿ ಮನೆ ಮೇಲೆ ಉರುಳಿದ ಮರ: ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 9:30 IST
Last Updated 17 ನವೆಂಬರ್ 2021, 9:30 IST
ಮರ ಉರುಳಿ ಬಿದ್ದಿರುವ ದೃಶ್ಯ
ಮರ ಉರುಳಿ ಬಿದ್ದಿರುವ ದೃಶ್ಯ   

ಮೈಸೂರು: ಇಲ್ಲಿನ ಲಕ್ಷ್ಮೀಪುರಂ ಪೊಲೀಸ್‌ ಠಾಣೆಯ ಎದುರಿನ ಮನೆಯೊಂದರ ಮೇಲೆ ಬುಧವಾರ ನಸುಕಿನಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿದೆ. ಮನೆಯ ಕೆಲವು ಭಾಗಗಳು ಇದರಿಂದ ಹಾನಿಗೀಡಾಗಿವೆ. ಜೆ.ಪಿ.ನಗರದಲ್ಲೂ ಮರವೊಂದು ರಸ್ತೆಗೆ ಉರುಳಿ ಸಂಚಾರ ಅಸ್ತವ್ಯಸ್ತಗೊಂಡಿತು.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ನಗರದಲ್ಲಿ ಮಳೆ ಸುರಿಯುತ್ತಿದೆ. ಜೆ.ಪಿ.ನಗರ, ವಿದ್ಯಾರಣ್ಯಾಪುರಂ, ಅಗ್ರಹಾರ, ಲಕ್ಷ್ಮೀಪುರಂ ಭಾಗಗಳಲ್ಲಿ ಮಂಗಳವಾರ ಧಾರಾಕಾರವಾಗಿ ಮಳೆ ಸುರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.