ADVERTISEMENT

ದೆಹಲಿಯ IIT–ಮೈಸೂರು ವಿ.ವಿ.ನಡುವೆ ಒಡಂಬಡಿಕೆ: ಯುವಜನ ಕೇಂದ್ರಿತ ಸಂಶೋಧನೆಗೆ ಒತ್ತು

ದೆಹಲಿಯ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 2:51 IST
Last Updated 3 ಆಗಸ್ಟ್ 2025, 2:51 IST
ವಿಜ್ಞಾನ ಭವನದಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮವನ್ನು ದೆಹಲಿ ಐಐಟಿ ಸಲಹೆಗಾರ್ತಿ ಶಿಖಾ ಧವನ್ ಉದ್ಘಾಟಿಸಿದರು. ಕೆ.ಎನ್. ಅಮೃತೇಶ್, ಎಂ.ಕೆ. ಸವಿತಾ, ಪ್ರೊ. ಎನ್‌.ಕೆ. ಲೋಕನಾಥ್‌, ರೇಖಾ ಹಾಗೂ ಜಿ.ಆರ್. ಜನಾರ್ಧನ್‌ ಜೊತೆಗಿದ್ದರು – ಪ್ರಜಾವಾಣಿ ಚಿತ್ರ
ವಿಜ್ಞಾನ ಭವನದಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮವನ್ನು ದೆಹಲಿ ಐಐಟಿ ಸಲಹೆಗಾರ್ತಿ ಶಿಖಾ ಧವನ್ ಉದ್ಘಾಟಿಸಿದರು. ಕೆ.ಎನ್. ಅಮೃತೇಶ್, ಎಂ.ಕೆ. ಸವಿತಾ, ಪ್ರೊ. ಎನ್‌.ಕೆ. ಲೋಕನಾಥ್‌, ರೇಖಾ ಹಾಗೂ ಜಿ.ಆರ್. ಜನಾರ್ಧನ್‌ ಜೊತೆಗಿದ್ದರು – ಪ್ರಜಾವಾಣಿ ಚಿತ್ರ   

ಮೈಸೂರು: ‘ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯು ( ಐಐಟಿ) ಮೈಸೂರು ವಿಶ್ವವಿದ್ಯಾಲಯದ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಇದು ಸಂಶೋಧನೆ, ಆವಿಷ್ಕಾರ ಹಾಗೂ ಉದ್ಯಮಗಳ ಬಗೆಗಿನ ಅಧ್ಯಯನಕ್ಕೆ ಪರಸ್ಪರ ಸಹಕಾರಿ ಆಗಲಿದೆ’ ಎಂದು ಐಐಟಿ ಸಲಹೆಗಾರ್ತಿ ಶಿಖಾ ಧವನ್ ತಿಳಿಸಿದರು.

ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ದೆಹಲಿ ಐಐಟಿಯ ಫೌಂಡೇಶನ್‌ ಫಾರ್ ಇನೋವೇಶನ್ ಆ್ಯಂಡ್ ಟೆಕ್ನಾಲಜಿ ಟ್ರಾನ್ಸ್‌ಫರ್ ಹಾಗೂ ಕೇಂದ್ರ ಸರ್ಕಾರದ ನೀತಿ ಆಯೋಗದ ಪ್ರತಿನಿಧಿಗಳೊಂದಿಗಿನ ಸಂವಾದದಲ್ಲಿ ಅವರು ಮಾತನಾಡಿದರು.

‘ಪಾರಂಪರಿಕ ಇತಿಹಾಸ ಹೊಂದಿರುವ ಮೈಸೂರು ವಿ.ವಿ.ಯಲ್ಲಿ 1.30 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಒಡಂಬಡಿಕೆಯು ಈ ಯುವಜನರ ಸಬಲೀಕರಣದ ಜತೆಗೆ ವಿಕಸಿತ ಭಾರತ ನಿರ್ಮಾಣಕ್ಕೂ ಸಹಕಾರಿಯಾಗಲಿದೆ. ಈ ಸಂಶೋಧನೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿದೆ’ ಎಂದರು.

ADVERTISEMENT

‘ಒಂದು ತಲೆಮಾರಿನ ಜ್ಞಾನವಂತರನ್ನು ಸಮಾಜಕ್ಕೆ ಕೊಡುಗೆ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಶಿಕ್ಷಕರಿಂದ ವಿದ್ಯಾರ್ಥಿಗಳು ಸಂಶೋಧನೆ ಹಾಗೂ ಆವಿಷ್ಕಾರಗಳ ಬಗ್ಗೆ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮೈಸೂರು ವಿ.ವಿ. ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ‘ಎಐಐಟಿ ಹಾಗೂ ನೀತಿ ಆಯೋಗದ ಅಧ್ಯಯನಕ್ಕೆ ಮೈಸೂರು ವಿ.ವಿ. ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. 18 ರಾಜ್ಯಗಳ 108 ವಿವಿಗಳಲ್ಲಿ ಈ ಸಂಶೋಧನೆ ನಡೆಯಲಿದೆ. ಯುವಜನತೆಯಲ್ಲಿ ಕೌಶಲ ಬೆಳೆಸುವುದರ ಜತೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಇದರ ಮುಖ್ಯ ಉದ್ದೇಶ’ ಎಂದರು.

‘ ಬದಲಾದ ತಂತ್ರಜ್ಞಾನಕ್ಕೆ ತಕ್ಕಂತೆ ಹೊಸ ಉದ್ಯಮಗಳ ಬೇಡಿಕೆಗೆ ಅನುಗುಣವಾಗಿ ಆವಿಷ್ಕಾರಗಳು ಹಾಗೂ ಕೌಶಲ ವೃದ್ಧಿಯ ಅಗತ್ಯವಿದೆ. ಶೈಕ್ಷಣಿಕ ಪ್ರಗತಿ ಜತೆಗೆ ಹೊಸ ಪ್ರಯೋಗಗಳನ್ನು ನಡೆಸಬೇಕಿದೆ. ಇದರಿಂದ ವಿಕಸಿತ ಭಾರತದ ಗುರಿ ತಲುಪಲು ಸಾಧ್ಯ’ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಪ್ರೊ. ಜಿ.ಆರ್. ಜನಾರ್ಧನ್ ಮಾತನಾಡಿದರು. ಕುಲಸಚಿವೆ ಎಂ.ಕೆ.ಸವಿತಾ, ಹಣಕಾಸು ಅಧಿಕಾರಿ ರೇಖಾ, ಐಕ್ಯೂಎಸಿ ನಿರ್ದೇಶಕ ಕೆ.ಎನ್. ಅಮೃತೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.