ಎಚ್.ಡಿ.ಕೋಟೆ: ತಾಲ್ಲೂಕಿನ ತುಂಬಸೋಗೆ ಗ್ರಾಮದ ಖಾಸಗಿ ಜಮೀನಿನಲ್ಲಿ ಮೂರು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ.
ಕಾಂಗ್ರೆಸ್ ಮುಖಂಡ ನಾಗರಾಜು ಅವರ ಜಮೀನಿನಲ್ಲಿ ಗುರುವಾರ ಕರುವಿನ ಕುತ್ತಿಗೆ ಭಾಗಕ್ಕೆ ದಾಳಿ ಮಾಡಿ ರಕ್ತ ಕುಡಿದು ಚಿರತೆ ಪರಾರಿಯಾಗಿತ್ತು, ಇದರಿಂದ ಭಯಭೀತಗೊಂಡ ಅಕ್ಕ-ಪಕ್ಕದ ಜಮೀನಿನವರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಚಿರತೆ ಕಾರ್ಯಪಡೆಯ ಸಿಬ್ಬಂದಿ ಗುರುವಾರ ರಾತ್ರಿ ಜಮೀನಿನಲ್ಲಿ ಬೋನು ಇರಿಸಿ, ಅದರೊಳಗೆ ಕರುವಿನ ಮೃತದೇಹವನ್ನು ಇರಿಸಿದ್ದರು. ಕರುವಿನ ಜಾಡು ಹಿಡಿದು ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ನಾರಾಯಣ, ಪರಮೇಶ್, ಸ್ನೇಹಾ, ಧನುಷ್, ದೀಪಕ್ ಚಿರತೆ ಸ್ಥಳಾಂತರಿಸುವ ಕಾರ್ಯದಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.