ADVERTISEMENT

ಮೈಸೂರು ದಸರಾ: ಕುಂಟೆ ಬಿಲ್ಲೆ, ಬುಗುರಿ ಆಡಿ ಸಂಭ್ರಮಿಸಿದ ಚಿಣ್ಣರು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 7:52 IST
Last Updated 30 ಸೆಪ್ಟೆಂಬರ್ 2022, 7:52 IST
ಮಕ್ಕಳ ದಸರಾ ಉಪ ಸಮಿತಿಯು ಶುಕ್ರವಾರ ಆಯೋಜಿಸಿದ್ದ ದೇಸಿ ಆಟಗಳ ಸ್ಪರ್ಧೆಯನ್ನು ಡಿಡಿಪಿಐ ರಾಮಚಂದ್ರರಾಜೇ ಅರಸ್ ಬುಗುರಿ ಆಡುವ ಮೂಲಕ ಉದ್ಘಾಟಿಸಿದರು
ಮಕ್ಕಳ ದಸರಾ ಉಪ ಸಮಿತಿಯು ಶುಕ್ರವಾರ ಆಯೋಜಿಸಿದ್ದ ದೇಸಿ ಆಟಗಳ ಸ್ಪರ್ಧೆಯನ್ನು ಡಿಡಿಪಿಐ ರಾಮಚಂದ್ರರಾಜೇ ಅರಸ್ ಬುಗುರಿ ಆಡುವ ಮೂಲಕ ಉದ್ಘಾಟಿಸಿದರು   

ಮೈಸೂರು: ಮೈಸೂರು ದಸರಾ ಅಂಗವಾಗಿ ಮಕ್ಕಳ ದಸರಾ ಉಪ ಸಮಿತಿಯಿಂದ ದೇಸಿ ಆಟಗಳ ಸ್ಪರ್ಧೆಗಳನ್ನುಮಹಾರಾಣಿ ಪ್ರಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ ನಡೆಸಲಾಯಿತು.

ಕುಂಟೆ ಬಿಲ್ಲೆ, ಬುಗುರಿ, ಚೌಕಾಬಾರ, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ವಿವಿಧ ಶಾಲೆಗಳ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.

ಡಿಡಿಪಿಐ ರಾಮಚಂದ್ರರಾಜೇ ಅರಸ್ ಬುಗುರಿ ಬಿಡುವ ಮೂಲಕ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ಸದಸ್ಯರು, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಮಾಲಂಗಿ ಸುರೇಶ್, ಉಪ ನಿರ್ದೇಶಕರ ಕಚೇರಿಯ ಉಪಯೋಜನಾ ಸಮನ್ವಯಾಧಿಕಾರಿ ಬಿ.ಉದಯ್ ಕುಮಾರ್, ರಾಜಶೇಖರ್, ಸಹಾಯಕ ಯೋಜನಾ ಸಮನ್ವಯಾಧಿಕಾರಿ ಕೆ.ಸುರೇಶ್ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.