ADVERTISEMENT

ಮೈಸೂರು–ಮಂಗಳೂರು: ವಿಮಾನ ಸಂಚಾರ ವಿಳಂಬ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 12:18 IST
Last Updated 20 ಅಕ್ಟೋಬರ್ 2020, 12:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮೈಸೂರು: ಮೈಸೂರು–ಮಂಗಳೂರು ನಡುವೆ ವಿಮಾನ ಸಂಚಾರ ಆರಂಭಗೊಳ್ಳುವುದು ವಿಳಂಬವಾಗಲಿದೆ ಎಂದು ಮೈಸೂರು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಏರ್ ಇಂಡಿಯಾದ ಅಲಯನ್ಸ್‌ ಏರ್‌ ಸಂಸ್ಥೆ ಅ.25ರಿಂದ ಮೈಸೂರು–ಮಂಗಳೂರು ನಡುವೆ ಉಡಾನ್‌ ಯೋಜನೆಯಡಿ ವಿಮಾನ ಹಾರಾಟ ಆರಂಭಿಸುವುದಾಗಿ ಪ್ರಕಟಿಸಿತ್ತು.

ಎರಡೂ ನಗರಗಳ ನಡುವೆ ವಿಮಾನ ಹಾರಾಟ ಆರಂಭಿಸುವಂತೆ ಹಲವು ಸಂಘ–ಸಂಸ್ಥೆಗಳು, ವಾಣಿಜ್ಯೋದ್ಯಮಿಗಳು ಸೇರಿದಂತೆ ಪ್ರಮುಖರು ಆಗ್ರಹಿಸಿದ್ದರು.

ADVERTISEMENT

‘ಮೈಸೂರು–ಮಂಗಳೂರು ನಡುವೆ ಅಲಯನ್ಸ್‌ ಏರ್‌ ಸಂಸ್ಥೆಯೇ ವಿಮಾನ ಸಂಚಾರ ಆರಂಭಿಸಲಿದೆ. ಇದಕ್ಕೆ ಅಗತ್ಯವಾದ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ. ಸಂಸ್ಥೆಯು ಅನುಮತಿಯನ್ನು ಪಡೆದಿದೆ. ವಿಮಾನ ಹಾರಾಟ ಮಾರ್ಗಕ್ಕೂ ಪರವಾನಗಿ ದೊರೆತಿದೆ. ಮಂಡಕಳ್ಳಿ ವಿಮಾನ ನಿಲ್ದಾಣವೂ ಸಮಯ ಹೊಂದಿಸಲು ಸಹಮತ ವ್ಯಕ್ತಪಡಿಸಿದೆ’ ಎಂದು ಮಂಡಕಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್‌.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಲಯನ್ಸ್‌ ಏರ್‌ ಇದೇ 25ರಿಂದ ವಿಮಾನ ಹಾರಾಟ ಆರಂಭಿಸುತ್ತಿಲ್ಲ ಎಂಬುದನ್ನು ತಿಳಿಸಿದೆ. ಮಾಸಾಂತ್ಯ ಸೇರಿದಂತೆ ಯಾವಾಗ ಬೇಕಾದರೂ ಹಾರಾಟ ಆರಂಭಿಸಬಹುದು. ಈ ಬಗ್ಗೆ ಖಚಿತ ಮಾಹಿತಿಯಿಲ್ಲ’ ಎಂದು ಮಂಜುನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.