ADVERTISEMENT

ಶ್ವಾನದಳದೊಂದಿಗೆ ಕಾರ್ಖಾನೆ ಪರಿಶೀಲನೆ ಮಾಡಿದ ನಗರ ಪೊಲೀಸರು

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 4:54 IST
Last Updated 31 ಜನವರಿ 2026, 4:54 IST
ಮೈಸೂರು ನಗರ ಪೊಲೀಸರು ಶುಕ್ರವಾರ ಮೇಟಗಳ್ಳಿ ಹಾಗೂ ಹೆಬ್ಬಾಳ ವ್ಯಾಪ್ತಿಯಲ್ಲಿನ ರಾಸಾಯನಿಕ ಕಾರ್ಖಾನೆಗಳು, ದಾಸ್ತಾನು ಕೊಠಡಿ ಹಾಗೂ ವಿತರಣಾ ಘಟಕಗಳಿಗೆ ಶ್ವಾನದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಮೈಸೂರು ನಗರ ಪೊಲೀಸರು ಶುಕ್ರವಾರ ಮೇಟಗಳ್ಳಿ ಹಾಗೂ ಹೆಬ್ಬಾಳ ವ್ಯಾಪ್ತಿಯಲ್ಲಿನ ರಾಸಾಯನಿಕ ಕಾರ್ಖಾನೆಗಳು, ದಾಸ್ತಾನು ಕೊಠಡಿ ಹಾಗೂ ವಿತರಣಾ ಘಟಕಗಳಿಗೆ ಶ್ವಾನದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಮೈಸೂರು: ನಗರ ಪೊಲೀಸ್‌ ಇಲಾಖೆಯ ಅಧಿಕಾರಿ, ಸಿಬ್ಬಂದಿ ಶುಕ್ರವಾರ ಮೇಟಗಳ್ಳಿ ಹಾಗೂ ಹೆಬ್ಬಾಳ ವ್ಯಾಪ್ತಿಯಲ್ಲಿನ ರಾಸಾಯನಿಕ ಕಾರ್ಖಾನೆಗಳು, ದಾಸ್ತಾನು ಕೊಠಡಿ ಹಾಗೂ ವಿತರಣಾ ಘಟಕಗಳಿಗೆ ಶ್ವಾನದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯನಗರ ಉಪವಿಭಾಗದ ಎಸಿಪಿ ರವಿಪ್ರಸಾದ್‌ ನೇತೃತ್ವದಲ್ಲಿ ಆರು ಶ್ವಾನ ದಳ, ಇಬ್ಬರು ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿ ಕಾರ್ಖಾನೆಗಳಿಗೆ ಭೇಟಿ ನೀಡಿದರು. ಅಲ್ಲಿ ಉಪಯೋಗಿಸುವ ರಾಸಾಯನಿಕ ಹಾಗೂ ಕಚ್ಚಾ ಸಾಮಗ್ರಿಗಳನ್ನು ಶ್ವಾನಗಳ ಮೂಲಕ ತಪಾಸಣೆ ಮಾಡಿಸಲಾಯಿತು.

ಮಾಲೀಕರಿಗೆ ಕಾರ್ಖಾನೆಗಳಲ್ಲಿ ಉಪಯೋಗಿಸುವ ದಾಸ್ತಾನು ಕೊಠಡಿ ಹಾಗೂ ವಿತರಣಾ ಘಟಕಗಳಲ್ಲಿ ಸಂಗ್ರಹಿಸುವ ರಾಸಾಯನಿಕ ಹಾಗೂ ಕಚ್ಚಾ ಸಾಮಗ್ರಿಗಳ ವಿವರ ನಿರ್ವಹಿಸುವಂತೆ ಹಾಗೂ ನಿಷೇಧಿತ ರಾಸಾಯನಿಕ ಮತ್ತು ಕಚ್ಚಾ ಸಾಮಗ್ರಿಗಳ ಬಳಕೆ ಮಾಡದಂತೆ ಸಲಹೆ ನೀಡಿದ್ದು, ಸಂಶಯಾಸ್ಪದ ಚಟುವಟಿಕೆಗಳನ್ನು ನಡೆಸುವುದು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.