ADVERTISEMENT

ಪೌರಕಾರ್ಮಿಕನಿಗೆ ಮನೆ ನೀಡದ ಜನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 20:45 IST
Last Updated 3 ಆಗಸ್ಟ್ 2022, 20:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ‘ತಾಲ್ಲೂಕಿನ ಬೀರಿಹುಂಡಿ ಗ್ರಾ.ಪಂನಲ್ಲಿ ಇರುವುದ ನಾನೊಬ್ಬನೇ ಪೌರಕಾರ್ಮಿಕ. ನಾಲ್ಕು ಗ್ರಾಮಗಳನ್ನು ಸ್ವಚ್ಛಗೊಳಿಸುವ ನನಗೆ ಗ್ರಾಮದಲ್ಲಿ ಉಳಿಯಲು ಮನೆಯಿಲ್ಲ. ನನಗೊಬ್ಬನಿಗಷ್ಟೇ ಅಲ್ಲ ಪರಿಶಿಷ್ಟ ಸಮುದಾಯಕ್ಕೆ ಬಾಡಿಗೆ ಮನೆಯನ್ನೂ ಊರಿನಜನ ನೀಡುತ್ತಿಲ್ಲ..’

– ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪೌರಕಾರ್ಮಿಕರ ಕುಂದುಕೊರತೆ ಸಭೆಯಲ್ಲಿಪೌರಕಾರ್ಮಿಕ ಮಂಜುನಾಥ್‌ ಹೀಗೆ ಅಳಲು ತೋಡಿಕೊಂಡರು.

‘ಮೈಸೂರಿನ ಬೋಗಾದಿಯಲ್ಲಿ ಬಾಡಿಗೆ ಮನೆ ಮಾಡಿ ಬೀರಿಹುಂಡಿಗೆ ಹೋಗಿ ಬರಬೇಕಿದೆ. ಸಂಬಳವೂ ಹೆಚ್ಚಿಲ್ಲ. ಮಕ್ಕಳನ್ನು ಇಲ್ಲಿನ ಶಾಲೆಗೆ ಸೇರಿಸಿದ್ದೇನೆ.ಮನೆ ಅಥವಾ ಜಾಗಕ್ಕೆಂದು ಅರ್ಜಿ ಸಲ್ಲಿಸಿದರೂ ಸ್ಪಂದನೆ ದೊರೆತಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.