ADVERTISEMENT

ಬಡ್ಡಿ ಸಮೇತ ಚುಕ್ತಾ ಮಾಡುವೆ: ಪ್ರಿಯಾಂಕ್, ಲಾಡ್‌ಗೆ ಪ್ರತಾಪ ಸಿಂಹ ತಿರುಗೇಟು

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 4:19 IST
Last Updated 18 ಜುಲೈ 2025, 4:19 IST
ಪ್ರತಾಪ್‌ ಸಿಂಹ 
ಪ್ರತಾಪ್‌ ಸಿಂಹ    

ಮೈಸೂರು: ‘ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಸಂತೋಷ್‌ ಲಾಡ್‌ ಅವರೆಲ್ಲ ಪ್ರಶ್ನೆಗಳಿಗೆ ಮುಂದಿನ ವಾರದಲ್ಲೇ ಬಡ್ಡಿ ಸಮೇತ ಚುಕ್ತಾ ಮಾಡುವೆ’ ಎಂದು ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಹೇಳಿದರು. 

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅವರಿಬ್ಬರೂ ಪ್ರಶ್ನೆಗೆ ಉತ್ತರ ನೀಡದೇ ಪಠ್ಯದಾಚೆ ಮಾತನಾಡುತ್ತಾರೆ. ನಿಮ್ಮ ಖಾತೆ ಬಗ್ಗೆ ಸುದ್ದಿಗೋಷ್ಠಿ ಮಾಡಿ ಎಂದರೆ ಬೇರಿನ್ನೇನೊ ಮಾತನಾಡುತ್ತಾರೆ’ ಎಂದರು.

‘ಸಿಂಗದೂರು ಸೇತುವೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಪಾಲನೆಯಾಗಿದೆ. ಕೇಂದ್ರ ಸರ್ಕಾರವೇ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಿದೆ. ಸೇತುವೆ ಡಿಪಿಆರ್‌ ಮಾಡಿಸಿರುವುದಾಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ. ಆದರೆ, ಬಿ.ಎಸ್‌.ಯಡಿಯೂರಪ್ಪ, ಬಿ.ವೈ.ರಾಘವೇಂದ್ರ ಅವರ ಶ್ರಮದಿಂದ ಯೋಜನೆ ಪೂರ್ಣಗೊಂಡಿದೆ’ ಎಂದರು.

ADVERTISEMENT

‘ಫಿಲಂ ಸಿಟಿ, ಪ್ರವಾಸೋದ್ಯಮ ಸರ್ಕೀಟ್‌ ಏನೇನೂ ಸಾಧನೆ ಆಗಿಲ್ಲ. ಹೀಗಿರುವಾಗ ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಹದ್ದುಬಸ್ತಿನಲ್ಲಿಡಲು ತಂತ್ರ ಮಾಡಿದ್ದೇ ಸಿದ್ದರಾಮಯ್ಯ ಅವರ ಸಾಧನೆಯಾಗಿದೆ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.