ADVERTISEMENT

ಮೈಸೂರು: ನಗರದ ವಿವಿಧಡೆ ಶಿವರಾಜಕುಮಾರ್ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 8:11 IST
Last Updated 17 ಮಾರ್ಚ್ 2022, 8:11 IST
   

ಮೈಸೂರು: ನಟ ಶಿವರಾಜಕುಮಾರ್ ಅವರು ಗುರುವಾರ ನಗರದಲ್ಲಿ ಹಲವೆಡೆ ಸಂಚರಿಸಿ, ಅಭಿಮಾನಿಗಳೊಂದಿಗೆ ಬೆರೆತರು.

ಇಲ್ಲಿನ ಶಕ್ತಿಧಾಮ, ಗಾಯತ್ರಿ ಸಿನಿಮಾಮಂದಿರ, ಪಡುವಾರಹಳ್ಳಿಗೆ ಭೇಟಿ ನೀಡಿದರು.

ಗಾಯತ್ರಿ ಸಿನಿಮಾಮಂದಿರದಲ್ಲಿ ನೂರಾರು ಮಂದಿ ಅಭಿಮಾನಿಗಳು ಅವರನ್ನು ಸುತ್ತುವರೆದು ಸೆಲ್ಪೀ ತೆಗೆದುಕೊಂಡು ಖುಷಿಪಟ್ಟರು. ಗೇಟಿನ ಮೇಲೆ ಹತ್ತಿದ ಶಿವರಾಜಕುಮಾರ್ ರಸ್ತೆಯಲ್ಲಿ ಸೇರಿದ್ದ ನೂರಾರು ಮಂದಿಯತ್ತ ಕೈಬೀಸಿದರು. ನಂತರ ವಿವಿಧ ಚಿತ್ರಮಂದಿರಗಳಿಗೆ ಭೇಟಿ ನೀಡಿದರು.

ADVERTISEMENT

ಇಲ್ಲಿನ ಪಡುವಾರಹಳ್ಳಿಯ ಪುನೀತ್‌ರಾಜಕುಮಾರ್ ರಸ್ತೆಯ 4ನೇ ಮೇನ್‌ನಲ್ಲಿ ಪುನೀತ್‌ ಅವರ ಪ್ರತಿಮೆಯನ್ನು ಉದ್ಘಾಟಿಸಿ, ಪುಷ್ಪನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.