ಮೈಸೂರು: ‘ದಸರಾ ಉದ್ಘಾಟಕರಾಗಿ ಲೇಖಕಿ ಬಾನು ಮುಷ್ತಾಕ್ ಅವರ ಆಯ್ಕೆ ವಿರೋಧಿಸಿ, ಒಂದು ರಾಜಕೀಯ ಪಕ್ಷದ ನಾಯಕರು ಹಾಗೂ ವಿವಿಧ ಮತೀಯ ಸಂಘಟನೆಗಳ ಕೆಲ ಮುಖಂಡರು ನೀಡುತ್ತಿರುವ ಹೇಳಿಕೆಗಳಿಂದ ಧಾರ್ಮಿಕ ಅಶಾಂತಿ ಸೃಷ್ಟಿಯಾಗುವ ವಾತಾವರಣ ನಿರ್ಮಾಣವಾಗುತ್ತಿದೆ. ಈ ಬೆಳವಣಿಗೆಯನ್ನು ತಡೆಯಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ದ್ವೇಷ ಕಾರುವವರ ಮೇಲೆ ಕಠಿಣ ಕ್ರಮ ಜರುಗಿಸಲು ಹೈಕೋರ್ಟ್ ಮುಂದಾಗಬೇಕು. ನಾಡಹಬ್ಬಕ್ಕೆ ಅಡಚಣೆ ಮಾಡಿ ಅದರ ಪಾವಿತ್ರ್ಯ ಹಾಳು ಮಾಡುವ ವರ್ತನೆಯನ್ನು ಕೆಲವರು ತೋರುತ್ತಿದ್ದಾರೆ. ಇದು ಪ್ರವಾಸಿಗರಿಗೆ ಅಡೆತಡೆ ಉಂಟು ಮಾಡುವಂತಿದೆ’ ಎಂದು ದೂರಿದ್ದಾರೆ.
‘ದಸರಾ ಸಾಮಾಜಿಕ ಸೌಹಾರ್ದ ಕಾಪಾಡುವ ಸಾಂಸ್ಕೃತಿಕ ಹಬ್ಬ. ಈ ಉತ್ಸವದಲ್ಲಿ ಧರ್ಮದ ದ್ವೇಷ ತುಂಬುವುದು ಹೇಡಿಗಳ ಕೃತ್ಯ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.