
ಹಾಲು ಕರೆಯುವ ಸ್ಫರ್ಧೆ
ಮೈಸೂರು: ನಗರ ಗೋಪಾಲಕರ ಸಂಘದ 20ನೇ ವಾರ್ಷಿಕೋತ್ಸವ ಪ್ರಯುಕ್ತ ಜ.24 ಮತ್ತು 25ರಂದು ಇಲ್ಲಿನ ಜೆ.ಕೆ.ಮೈದಾನದಲ್ಲಿ ರಾಜ್ಯಮಟ್ಟದ ಹಾಲು ಕರೆಯುವ ಸ್ಫರ್ಧೆ ನಡೆಯಲಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಡಿ.ನಾಗಭೂಷಣ್, ‘ಎರಡೂ ದಿನ ಬೆಳಿಗ್ಗೆ 6.30 ಹಾಗೂ ಸಂಜೆ 5.30ಕ್ಕೆ ಸ್ಪರ್ಧೆ ನಡೆಯಲಿದೆ’ ಎಂದರು.
‘1ನೇ ಬಹುಮಾನವಾಗಿ ₹1.50 ಲಕ್ಷ, 2ನೇ ಬಹುಮಾನವಾಗಿ ₹1 ಲಕ್ಷ, 3ನೇ ಬಹುಮಾನವಾಗಿ ₹75 ಸಾವಿರ, 4ನೇ ಬಹುಮಾನವಾಗಿ ₹50 ಸಾವಿರ ಹಾಗೂ 5ನೇ ಬಹುಮಾನವಾಗಿ ₹25 ಸಾವಿರ ಮತ್ತು ಟ್ರೋಫಿಗಳನ್ನು ನೀಡಲಾಗುವುದು. ಜ.23ರ ಸಂಜೆ 4ರವರೆಗೆ ಗೋಪಾಲಕರ ಹೆಸರು ನೋಂದಣಿಗೆ ಅವಕಾಶವಿದೆ. ಅಂದು ಎಲ್ಲ ಹಸುಗಳನ್ನು ಮೈದಾನಕ್ಕೆ ಕರೆತರಬೇಕು. ಮಾಹಿತಿ ಹಾಗೂ ನೋಂದಣಿಗೆ ಮೊ.ಸಂ. 99864 16956 ಸಂಪರ್ಕಿಸಿ’ ಎಂದರು.
‘23ರಂದು ಮಧ್ಯಾಹ್ನ 12ಕ್ಕೆ ನಗರದಲ್ಲಿಕೃಷ್ಣನ ಮೂರ್ತಿ ಮೆರವಣಿಗೆ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡುವರು. 25ರ ಸಂಜೆ 6.30ಕ್ಕೆ ವಿಜೇತ ಹಸುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಗುವುದು. ಶಾಸಕ ಕೆ.ಹರೀಶ್‌ಗೌಡ ಅಧ್ಯಕ್ಷತೆ ವಹಿಸುವರು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.