ಮೈಸೂರು: ‘ಕುಟುಂಬ ರಾಜಕಾರಣ ಕುರಿತು ಮಾತನಾಡುವವರ ಮನೆಯ ದೋಸೆಗಳೂ ತೂತಾಗಿವೆ’ ಎಂದು ವಿಧಾನ ಪರಿಷತ್ ಚುನಾವಣೆಯ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ತಿರುಗೇಟು ನೀಡಿದರು.
‘ಉತ್ತರ ಕರ್ನಾಟಕ, ಕನಕಪುರ ಸೇರಿ ದಂತೆ ಎಲ್ಲ ಭಾಗ ಗಳಲ್ಲೂ ಕುಟುಂಬ ರಾಜಕಾರಣ ಇದೆ. ಕೇವಲ ನಮ್ಮ ಬಗ್ಗೆ ಮಾತ್ರವೇ ಟೀಕೆ ಮಾಡಲಾಗುತ್ತಿದೆ’ ಎಂದು ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ಹೇಳಿದರು.
‘ಈಗಾಗಲೇ ನನಗೆ ಗೆಲುವು ಸಿಕ್ಕಾಗಿದೆ. ಇನ್ನು ಮತಗಳ ಅಂತರವಷ್ಟೇ ತಿಳಿಯಬೇಕಿದೆ. ಚುನಾವಣೆಯಲ್ಲಿ ಕಠಿಣ ಸವಾಲು ಎದುರಾಗಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.