ADVERTISEMENT

ಸುತ್ತೂರು ಜಾತ್ರೆ: ಗಾಳಿಪಟ ಸ್ಪರ್ಧೆ ವಿಜೇತರು

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 13:15 IST
Last Updated 19 ಜನವರಿ 2026, 13:15 IST
   

ಸುತ್ತೂರು (ಮೈಸೂರು ಜಿಲ್ಲೆ): ಇಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಗಾಳಿಪಟ ಹಾರಿಸುವ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.

ಮೊದಲ ಮೂರು ಸ್ಥಾನ ಗಳಿಸಿದವರಿಗೆ ಕ್ರಮವಾಗಿ ₹2ಸಾವಿರ, ₹ 1,500, ₹ 1,000 ಹಾಗೂ ಸಮಾಧಾನಕರ ಬಹುಮಾನ ಪಡೆದ ಇಬ್ಬರಿಗೆ ತಲಾ ₹ 500 ನೀಡಲಾಯಿತು.

ಸಾರ್ವಜನಿಕರ ವಿಭಾಗ: ಚಾಮರಾಜನಗರ ಜಿಲ್ಲೆ ಹರಳಿಕಟ್ಟೆಯ ಗುರುಸಿದ್ದಪ್ಪ (ಪ್ರ), ಮೈಸೂರಿನ ಗಾಂಧಿನಗರ ಶಂಕರ್‌ (ದ್ವಿ), ಸೋಮಶೇಖರ್‌ಗೌಡ (ತೃ), ಮೈಸೂರಿನ ಕವಿತಾ ಹಾಗೂ ಹಾಸನ ಜಿಲ್ಲೆ ದೊಡ್ಡಎರಗನಾಳು ಗ್ರಾಮದ ಧನುಷ್‌ಗೌಡ (ಇಬ್ಬರಿಗೂ ಸಮಾಧಾನಕರ).

ADVERTISEMENT

ಪ್ರಾಥಮಿಕ ಶಾಲಾ ವಿಭಾಗ: ಸುತ್ತೂರು ಜೆಎಸ್‌ಎಸ್‌ ಎಚ್‌ಪಿಎಸ್‌ನ ಕಿಶೋರ್‌ (ಪ್ರ), ಮೈಸೂರು ಆರ್‌ವಿಕೆಯ ದೀಪ್ತಿ ಆರ್. (ದ್ವಿ), ಸುತ್ತೂರು ಜೆಎಸ್‌ಎಸ್‌ ಎಚ್‌ಪಿಎಸ್‌ನ ನಿತೇಶ್ (ತೃ), ಧ್ವನಿ ಹಾಗೂ ಹಿತೇಶ್ ಗೌಡ (ಸಮಾಧಾನಕರ).

ಕಾಲೇಜು ವಿಭಾಗ: ಜೆಎಸ್ಎಸ್‌ ಫಾರ್ಮಸಿ ಕಾಲೇಜಿನ ಧನುಷ್ ಯು. (ಪ್ರ), ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನ ತೇಜಸ್ (ದ್ವಿ), ಹೇಮಂತ್ (ತೃ), ದೇವನೂರು ಎಸ್‌ಜಿಎಂ ಪಾಲಿಟೆಕ್ನಿಕ್‌ನ ಜೀವನ್ ಡಿ.ಎಸ್. ಹಾಗೂ ಜೆಎಸ್‌ಎಸ್‌ ಪಾಲಿಟೆಕ್ನಿಕ್‌ನ ದೀಪು (ಸಮಾಧಾನಕರ).

ಪ್ರೌಢಶಾಲಾ ವಿಭಾಗ: ಮೈಸೂರಿನ ಟೀಚರ್ಸ್‌ ಲೇಔಟ್‌ನ ಜೆಎಸ್‌ಎಸ್‌ ಪಬ್ಲಿಕ್ ಶಾಲೆಯ ನಿಖೇಶ್ (ಪ್ರ), ಸುತ್ತೂರು ಜೆಎಸ್ಎಸ್‌ ಪ್ರೌಢಶಾಲೆಯ ಆಕಾಶ್ (ದ್ವಿ), ಹನುಮಂತ (ತೃ), ಧಾರವಾಡ ಎಸ್‌ಎಂಪಿಯ ಲಕ್ಷಿತ್‌ ಹಾಗೂ ಹೊಸಕೋಟೆ ಎಸ್‌ಡಿಎಂನ ಗುರು ಎಸ್‌.ಎಸ್. (ಸಮಾಧಾನಕರ).

ನಗದು ಬಹುಮಾನವನ್ನು ವಿಜೇತರ ಬ್ಯಾಂಕ್‌ ಖಾತೆಗೆ ನೇರವಾಗಿ ಸಂದಾಯ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.