ಧೈರ್ಯವಾಗಿ ಲಸಿಕೆ ಹಾಕಿಸಿಕೊಳ್ಳಿ
ಕೋವಿಡ್–19 ಲಸಿಕೆ ಮೇಲೆ ಎಲ್ಲರೂ ವಿಶ್ವಾಸವಿಡಬೇಕು ಎಂಬ ಸಂದೇಶ ಸಾರಲು ಹಾಗೂ ಕೆಲವರಲ್ಲಿ ಇರುವ ಆತಂಕ ದೂರ ಮಾಡುವ ಉದ್ದೇಶದಿಂದ ಸ್ವಯಂಇಚ್ಛೆಯಿಂದ ಮುಂದೆ ಬಂದೆ. ಯಾವುದೇ ಸಮಸ್ಯೆ ಆಗಿಲ್ಲ. ಒಬ್ಬವೈದ್ಯನಾಗಿ ಇವತ್ತೇಲಸಿಕೆಪಡೆಯಬೇಕೇ ಅಥವಾ ಬೇರೆಯವರಿಗೆಅವಕಾಶ ಮಾಡಿಕೊಡಬೇಕೇ ಎಂಬ ಯೋಚನೆ ಮನಸ್ಸಿನಲ್ಲಿತ್ತು. ಆದರೆ, ಬೇರೆ ವೈದ್ಯರು ಹಾಗೂ ಇತರ ಆರೋಗ್ಯ ಕಾರ್ಯಕರ್ತರಿಗೆಧೈರ್ಯ ಬರಲಿದೆ ಎಂದು ಜಿಲ್ಲಾಡಳಿತ ಮನದಟ್ಟು ಮಾಡಿದ್ದರಿಂದ ಮುಂದೆ ನಿಂತು ಲಸಿಕೆ ತೆಗೆದುಕೊಂಡಿದ್ದೇನೆ. ಎಲ್ಲರೂ ಧೈರ್ಯವಾಗಿ ಲಸಿಕೆ ಹಾಕಿಸಿಕೊಳ್ಳಬಹುದು.
ಸಾರ್ವಜನಿಕ ಕ್ಷೇತ್ರದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಕೀಳಾಗಿ ನೋಡಲಾಗುತ್ತದೆ. ಆದರೆ, ಭಾರತದ ಆರೋಗ್ಯ ಕ್ಷೇತ್ರದಲ್ಲಿ ಇದೊಂದು ಐತಿಹಾಸಿಕ ದಿನ. ಇಡೀ ರಾಷ್ಟ್ರದಲ್ಲಿ ವ್ಯವಸ್ಥಿತವಾಗಿ ಒಂದೇ ಸಮಯದಲ್ಲಿ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ಲಸಿಕೆ ಹಾಕಿಸಿಕೊಳ್ಳುವುದರಜೊತೆಗೆ ಮಾಸ್ಕ್ ಧರಿಸುವುದು ಸೇರಿದಂತೆ ಇತರ ಮುನ್ನೆಚ್ಚರಿಕೆ ಕ್ರಮಗಳನ್ನೂಅನುಸರಿಸಬೇಕು.
–ಡಾ.ಆರ್.ಬಾಲಸುಬ್ರಮಣ್ಯಂ,ಸಂಸ್ಥಾಪಕ, ವಿವೇಕಾನಂದ ಸ್ಮಾರಕ ಆಸ್ಪತ್ರೆ, ಸರಗೂರು, ಮೈಸೂರು ಜಿಲ್ಲೆ
***
ಯಾವುದೇ ತೊಂದರೆ ಆಗಲಿಲ್ಲ
ಲಸಿಕೆ ತೆಗೆದುಕೊಳ್ಳುವಂತೆ ಕೆ.ಆರ್.ಆಸ್ಪತ್ರೆಯವೈದ್ಯಕೀಯ ಅಧೀಕ್ಷಕರು ಹೇಳಿದ ತಕ್ಷಣ ಒಪ್ಪಿಗೆ ನೀಡಿದೆ. ನನಗೆ ಯಾವುದೇ ತೊಂದರೆ ಆಗಿಲ್ಲ, ಭಯವೂಆಗಲಿಲ್ಲ. ಲಸಿಕೆ ತೆಗೆದುಕೊಂಡಿದ್ದೇನೆ ಎಂಬುದೇ ಗೊತ್ತಾಗುತ್ತಿಲ್ಲ. ಕೋವಿಡ್–19 ಸಮಸ್ಯೆಯಿಂದ ಮುಕ್ತವಾಗಲು ಎಲ್ಲರೂ ಈ ಲಸಿಕೆ ತೆಗೆದುಕೊಳ್ಳಬೇಕು.
–ಯು.ಸಂದೇಶ್,ಅಂಬುಲೆನ್ಸ್ ಚಾಲಕ, ಕೆ.ಆರ್.ಆಸ್ಪತ್ರೆ, ಮೈಸೂರು
***
ಯಾವುದೇ ಅಡ್ಡಪರಿಣಾಮ ಉಂಟಾಗಲ್ಲ
ಸ್ವಯಂ ಇಚ್ಛೆಯಿಂದ ಲಸಿಕೆ ತೆಗೆದುಕೊಂಡಿದ್ದೇನೆ. ಅಡ್ಡಪರಿಣಾಮ ಉಂಟಾಗುತ್ತದೆ ಎಂಬ ಭಯ, ತಪ್ಪು ತಿಳಿವಳಿಕೆ ಕೆಲವರಲ್ಲಿ ಇದೆ. ಹಲವು ಊಹಾಪೋಹಗಳಿವೆ. ಆದರೆ, ನನಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಯಾವುದೇ ದುಷ್ಪರಿಣಾಮ ಆಗಿಲ್ಲ. ಹೀಗಾಗಿ, ಕೋವಿಡ್–19ನಿಂದ ಪಾರಾಗಲು, ವೈರಾಣುವನ್ನು ಚಿವುಟಿ ಹಾಕಲು ಲಸಿಕೆಯನ್ನು ಧೈರ್ಯದಿಂದ ಹಾಕಿಸಿಕೊಳ್ಳಬಹುದು.
–ಡಾ.ಎಚ್.ಎನ್.ವಿರೂಪಾಕ್ಷ,ವೈದ್ಯಕೀಯ ಅಧೀಕ್ಷಕ, ಪಿಕೆಟಿಬಿ ಆಸ್ಪತ್ರೆ ಸ್ಯಾನಿಟೋರಿಯಂ, ಮೈಸೂರು
***
ಆರಾಮವಾಗಿದ್ದೇನೆ...
ನನಗೆ ಯಾವುದೇ ಭಯ ಇಲ್ಲ. ಧೈರ್ಯದಿಂದ ಲಸಿಕೆ ತೆಗೆದುಕೊಂಡಿದ್ದೇನೆ. ಅರ್ಧ ಗಂಟೆ ಬಳಿಕ ಕೆಲಸ ಮುಂದುವರಿಸಿದೆ. ಯಾವುದೇ ಸಮಸ್ಯೆ ಉಂಟಾಗಿಲ್ಲ. ಮೊದಲಿನಂತೆಯೇ ಆರಾಮವಾಗಿದ್ದೇನೆ.ಜೆಎಸ್‌ಎಸ್ ಆಸ್ಪತ್ರೆಯ ಕೋವಿಡ್–19 ವಿಭಾಗದಲ್ಲೂ ನಾನು ಕೆಲಸ ಮಾಡಿದ್ದೇನೆ
–ಜಯಲಕ್ಷ್ಮಿ,ಹೌಸ್ ಕೀಪಿಂಗ್ ನೌಕರರು, ಜೆಎಸ್‌ಎಸ್ ಆಸ್ಪತ್ರೆ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.